(www.vknews. in) ದಾರುಲ್ ಇರ್ಷಾದ್ ದಮ್ಮಾಮ್ ಘಟಕದ 18 ನೇ ವಾರ್ಷಿಕ ಮಹಾ ಸಭೆ ಯು ಶುಕ್ರವಾರ (04/10/2024) ದಮ್ಮಾಮ್ ನ ರೆಸ್ಟೋರೆಂಟ್ ನಲ್ಲಿ ನಡೆಯಿತು.
ದುವಾ , ನಂತರ ಕಿರಾಹತ್ ನಿಂದ ಪ್ರಾರಂಭವಾದ ಸಭೆಯಲ್ಲಿ ದಾರುಲ್ ಇರ್ಷಾದ್ ಸೌದಿ ರಾಷ್ಟ್ರೀಯ ಸಮಿತಿಯ ಮುಖಂಡರು , ದಮ್ಮಾಮ್ ಘಟಕದ ಸದಸ್ಯರು , ಗಣ್ಯರು ,ಹಾಗೂ ಉಸ್ತಾದರು ಭಾಗ ವಹಿಸಿದರು. ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಕಮರುದ್ದೀನ್ ಗೂಡಿನ ಬಳಿ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು. ಪ್ರದಾನ ಕಾರ್ಯ ದರ್ಶಿ ಯಾದ ಶಾಹುಲ್ ಹಮೀದ್ ಉಜಿರೆ ಇವರು ಹಳೇ ಕಮಿಟಿ ವಿಸರ್ಜನೆ ಮಾಡಿ ಹೊಸ ಕಮಿಟಿ ರಚಿಸಿದರು.
ಹೊಸರ ಕಮಿಟಿಯ ಸಾರಥಿಗಳು ಗೌರವ ಅಧ್ಯಕ್ಷರಾಗಿ ಉಮ್ಮರ್ ಅಳಕೆ ಮಜಲ್ ಅಧ್ಯಕ್ಷರು ಅಥಾವುಲ್ಲಾ ಕಡಬ ಪ್ರದಾನ ಕಾರ್ಯ ದರ್ಶಿ ಅಬ್ದುಲ್ ಹಮೀದ್ ಕಬಕ ಕೋಶಾಧಿಕಾರಿ ರೋಶನ್ ಹುಸೈನ್ ಉಪಾಧ್ಯಕ್ಷರು ಉಬೈದುಲ್ಲಾ ಉಜಿರೆ , ಅಶ್ರಫ್ ಬೆಳ್ಳೂರು ಜೊತೆ ಕಾರ್ಯ ದರ್ಶಿ ಇಮ್ರಾನ್ ಫ಼ೈಝಲ್ ಲೆಕ್ಕ ಪರಿಶೋಧಕರು ಪೈರೋಝ್ ಯೂಸುಫ್ ಮಾದ್ಯಮ ಆಶಿಕ್ ವಿಟ್ಲ ಸಲಹೆಗಾರರು ಶಾಹುಲ್ ಹಮೀದ್ ಉಜಿರೆ , ಯೂಸುಫ್ ವಿಟ್ಲ, ರಹೀಂ ಅರ್ಕುಳ, ಇಕ್ಬಾಲ್ ಅರ್ಕುಳ, ಸಂಶುದ್ದೀನ್ ಅರ್ಕುಳ, ಅಮ್ಜತ್ ಖಾನ್ ಪೊಳ್ಯ , ನೌಶಾದ್ ಪೊಳ್ಯ, ಮೊಹಮ್ಮದ್ ಮಲೆಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ ಕಾರ್ಯ ಸಕ್ರಿಯ ಸದಸ್ಯರು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಶಾಹುಲ್ ಹಮೀದ್ ಉಜಿರೆ ಇವರು ಸಭೆಯನ್ನು ನಿರೂಪಿಸಿದರು. ಧನ್ಯವಾದ ದ ನಂತರ ಕಪ್ಪಾರ ದುವಾ ; 3 ಸಲಾತ್ ನೊಂದಿಗೆ ಸಭೆಯನ್ನು ಮುಕ್ತಾಯ ಮಾಡಲಾಯಿತು
ಹೊಸ ಕಮಿಟಿ ಗೆ ಶುಭಾಶಯ ಕೊರುವ ದಾರುಲ್ ಇರ್ಷಾದ್ ದಮ್ಮಾಮ್ ಘಟಕ ಸೌದಿ ಅರೇಬಿಯಾ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.