(www.vknews. in) ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಕೋಲ್ಪೆ – ಇಡ್ಕಿದು ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ಇಡ್ಕಿದು : ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾ ಸಭೆಯು ಜಮಹತ್ ಅಧ್ಯಕ್ಷ ಶೇಖಬ್ಬ ಹಾಜಿ ಕೋಲ್ಪೆ ಇವರ ಅಧ್ಯಕ್ಷತೆಯಲ್ಲಿ ಬದ್ರಿಯಾ ಮದ್ರಸ ಕೋಲ್ಪೆ ಇದರ ಸಭಾಂಗಣದಲ್ಲಿ ಇತ್ತಿಚೆಗೆ ನಡೆಯಿತು. ಬಿ , ಜೆ ,ಎಮ್ ಕೋಲ್ಪೆ ಇದರ ಖತೀಬ್ ಬಹು ನೌಶಾದ್ ಸಖಾಫಿ ಉಸ್ತಾದರು ವೀಕ್ಷಕರಾಗಿ ಆಗಮಿಸಿದ್ದರು. ಯಂಗ್ಮೆನ್ಸ್ ಪ್ರದಾನ ಕಾರ್ಯದರ್ಶಿ ರಿಯಾಜ್ ಕೋಲ್ಪೆ ವಾರ್ಷಿಕ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಕೋಲ್ಪೆ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಕೋಲ್ಪೆ. ಕೋಶಾಧಿಕಾರಿಯಾಗಿ ಅಯ್ಯುಬ್ ಕೋಲ್ಪೆ ಅವರನ್ನು ಆಯ್ಕೆ ಮಾಡಲಾಯಿತು ಉಪಾಧ್ಯಕ್ಷರಾಗಿ ನಿಸಾರ್ ಇಬ್ರಾಹಿಂ. ಸಂಚಾಲಕರಾಗಿ ರಿಯಾಜ್ ಕೋಲ್ಪೆ , ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಅಕ್ಕರೆ ಮತ್ತು ಸ್ಪೀಕರ್ ಆಗಿ ಲತೀಫ್ ದಲ್ಕಾಜೆ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಕುಂಞಿ ಕೋಲ್ಪೆ , ಬಶೀರ್ ಮೊಯಿದಿನಬ್ಬ ,ಆಸೀಫ್ ಕೋಲ್ಪೆ ,ಅಜಿನಾಸ್ ಕೋಲ್ಪೆ ನೌಶಾದ್ ಕೋಲ್ಪೆ , ಬಾತಿಶ್.S ಇವರನ್ನು ಆಯ್ಕೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಅಲ್ ಮಕರ್ ಸುನ್ನಿಯ ವಿದ್ಯಾ ಸಂಸ್ಥೆಯ್ಲಲಿ ಕಲಿತು ‘ಅಮಾನಿ’ ಬಿರುದು ಪಡೆದ ರಿಜ್ವಾನ್ ಅಮಾನಿ ಉಸ್ತಾದರಿಗೆ ಮತ್ತು ಯಂಗ್ ಮೆನ್ಸ್ ಗಲ್ಫ್ ಪ್ರತಿನಿಧಿಗಳಾದ ರಫೀಕ್ ಕುವೈತ್ ಹಾಗೂ ಬಶೀರ್ ಅಬುಧಾಬಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.