(www.vknews. in) *ಕರ್ನಾಟಕ ಅನಿವಾಸಿ ಭಾರತೀಯ ಸಮೀತಿ ಉಪಾಧ್ಯಕ್ಷರಾದ ಆರತಿ ಕೃಷ್ಣ ಅವರನ್ನು ಅಬ್ದುಲ್ ಅಜೀಜ್ ಪವಿತ್ರ ಅವರು ಬೇಟಿ ಮಾಡಿದರು
ಕರ್ನಾಟಕ ಅನಿವಾಸಿ ಭಾರತೀಯ ಸಮೀತಿ ಉಪಾಧ್ಯಕ್ಷರಾದ ಆರತಿ ಕೃಷ್ಣ ಅವರನ್ನು ಅಬ್ದುಲ್ ಅಜೀಜ್ ಪವಿತ್ರ ಅವರು ವಿಧಾನ ಸೌದದಲ್ಲಿ ಅವರ ಆಪೀಸಿನಲ್ಲಿ ಬೇಟಿಯಾಗಿ ಕೊಲ್ಲಿ ರಾಷ್ಟ್ರದಲ್ಲಿರುವ ಪ್ರವಾಸಿಗರ ವಿಷಯದ ಬಗ್ಗೆ ಚರ್ಚೆ ಮಾಡಿದರಲ್ಲದೆ,ಅತ್ತಾರು ವಿಷಯಗಳಿಂದ ಬೇರೆ ಬೇರೆ ರೀತಿಯಲ್ಲಿ ಜೈಲಿನಲ್ಲಿದ್ದಾರೆ. ಅವರ ಬಿಡುಗಡೆಗಾಗಿ ಏನು ಮಾಡಬೇಕು , ಅರಿಯದೆ ಕಾನೂನಿನ ಉಲ್ಲಂಗನೆ,ಅಣಕಾಸು ಸಮಸ್ಯೆಯಲ್ಲಿ ಸಮಯಕ್ಕೆ ಸರಿಯಾಗಿ iqama ಮುಂತಾದ permeet ಮಾಡದೆ ತಾಯ್ನಾಡಿಗೆ ಬರಲಾಗದೆ ಸಿಲುಕಿಕೊಂಡವರನ್ನು ಹೇಗೆ ಸಹಕರಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದರು .ಅಲ್ಲದೆ ಈ ಹಿಂದೆ ಅನಿವಾಸಿ ಕನ್ನಡಿಗರು ಕೇಳಿಕೊಂಡ ಬೇಡಿಕೆಯ ಬಗ್ಗೆ ನೆನಪಿಸುತ್ತಾ ಆದಷ್ಟು ಬೇಗ ನಿಮ್ಮ ಮನವಿಗಳನ್ನು ಮಾನ್ಯ ಮುಖ್ಯ ಮಂತ್ರಿಯವರೊಂದಿಗೆ ಚರ್ಚಿಸಿ ನೆರವೇರಿಸುತ್ತೇವೆ ಯಾವುದೇ ತೊಂದರೆ ಅಥವಾ ಕಷ್ಟದಲ್ಲಿ ಸಿಲುಕಿದಲ್ಲಿ ಅದಕ್ಕೆ ತಕ್ಷಣ ಪರಿಹಾರ ಮಾರ್ಗಕ್ಕಾಗಿ ಸದಾ ನಾನು ನಿಮ್ಮೋದಿಗಿದ್ದೇನೆ ಎಂದು ಭರವಸೆ ಕೊಟ್ಟಿದ್ದಾರೆ DR ಆರತಿ ಕೃಷ್ಣ ಅವರು. ಅದಲ್ಲದೆ ಪವಿತ್ರ ಅವರು NRI ಫಾರಂ ಇನ್ಷೂರೆನ್ಸ್ ಪದ್ಧತಿ ಕೂಡಲೇ ಆರಂಭಿಸಬೇಕು, KNRI website ಮಾಡಿ ಅನಿವಾಸಿ ಕನ್ನಡಿಗರ ಸರ್ವೆ ಮಾಡಬೇಕು,ವಿದೇಶ ಜೀವನ ಕೊನೆಗೊಳಿಸಿ ತಾಯ್ನಾಡಿನಲ್ಲಿರುವ ಬಡ ಅನಿವಾಸಿಗಳಿಗೆ ಸ್ವದ್ಯೋಗಕ್ಕಾಗಿ ಸರಕಾರದಿಂದ ಸಹಾಯ ಮಾಡಬೇಕು. ಅನಿವಾಸಿ ಕೇಂದ್ರದಲ್ಲಿ ಅವಶ್ಯ ಸಮಯಕ್ಕೆ ಸಹಕರಿಸಲು ಅನುಭವಿ ಪ್ರವಾಸಿಯೊಬ್ಬರನ್ನು ಸರಕಾರದ ಪ್ರತಿನಿಧಿಯನ್ನಾಗಿ ನೇಮಿಸಬೇಕು ಎಂದು ಒತ್ತಾಹಿಸಿದರು.ಸರಿ ಸುಮಾರು ಒಂದು ಗಂಟೆ ಕಾಲ ಮುಂದುವರಿದ ಮಾತುಕತೆಯ ನಂತರ ನಮ್ಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ Dr ಕೃಷ್ಣ ಅವರ ಬೇಟಿ ನನ್ನ ಹೋರಾಟಕ್ಕೆ ಫಲ ಸಿಗುವ ಸೂಚನೆ ಸಿಕ್ಕಿದೆ,ನಮ್ಮ ಬೇಡಿಕೆ ಕೂಡಲೇ ಈಡೇರಬಹುದು, ಶ್ರೀಮತಿ ಆರತಿಯವರು ಸದಾ ನಮೊಂದಿಗಿದ್ದಾರೆ ಇದೊಂದು ಹೊಸ ಮೈಲುಗಲ್ಲಾಗಬಹುದು ಎಂದು ಅನಿವಾಸಿ ಕನ್ನಡಿಗರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಜೀಜ್ ಪವಿತ್ರ ಅವರು ಸಂತೋಸಂದಿಂದ ಹೇಳಿದರು ಜೊತೆಗೆ ಬಹರೈನಿಂದ ಬಂದ ಕನ್ನಡ ಸಂಘದ ಅಧ್ಯಕ್ಷ ಅಮರನಾಥ ರೈ ಹಾಗೂ Dr ಬಾಲಕೃಷ್ಣ ಸೆಟ್ಟಿ ಬೆಂಗಳೂರು ಅವರು ಜೊತೆಗಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.