(www.vknews. in)ನವಂಬರ್ 1ರಿಂದ 3 ತನಕ ಪ್ರತಿಷ್ಠಿತ ಕಾಶಿಪಟ್ಣ ದಾರುನ್ನೂರು ಸಮನ್ವಯ ಶಿಕ್ಷಣ ಸಂಸ್ಥೆಯ ಸನದು ಪ್ರಧಾನ ಹಾಗೂ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ನಾಯಕರಿಂದ ಪರ್ಯಟನೆ
ಉಪ್ಪಿನಂಗಡಿ;ಖಾಝಿ ಶೈಖುನಾ ತ್ವಾಖಾ ಉಸ್ತಾದರ ನೇತೃತ್ವದಲ್ಲಿ ಮರ್ಹೂಂ ಶಹೀದ್ ಸಿ ಎಂ ಉಸ್ತಾದರ ಸ್ಮರಾಣಾರ್ಥ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶ ಕಾಶಿಪಟ್ಣದಲ್ಲಿ ತಲೆ ಎತ್ತಿ ನಿಂತಿರುವ ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಲೌಕಿಕ ಸಮನ್ವಯ ಬಹುಮುಖಿ ಶಿಕ್ಷಣ ಕೇಂದ್ರ ದಾರುನ್ನೂರು ಎಜುಕೇಶನಲ್ ಸೆಂಟರ್ ಇದರ ದಶವಾರ್ಷಿಕ ಹಾಗೂ ಪ್ರಥಮ ಸನದು ಪ್ರಧಾನ ಸಮ್ಮೇಳನ ಮುಂದಿನ ನವಂಬರ್ ಒಂದರಿಂದ ಮೂರರ ತನಕ ಅತಿ ವಿಜ್ರಂಬಣೆಯಿಂದ ನಡೆಯಲಿದ್ದು ಇದರ ಪ್ರಚಾರಾರ್ಥ ಸಂಸ್ಥೆಯ ಮುಖಂಡರು ಪರ್ಯಟನೆಯಲ್ಲಿದ್ದು ಇಂದು ಉಪ್ಪಿನಂಡಿಗೆ ಬೇಟಿ ನೀಡಿ ಪ್ರಚಾರ ವೈಖರಿಯ ಕುರಿತಂತೆ ಮಾಹಿತಿ ಪಡೆದು ಕೊಂಡರು.
ಸಾಮಾಜಿಕ ,ಧಾರ್ಮಿಕ, ರಾಜಕೀಯ,ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದ ಗಣ್ಯಾತಿ ಗಣ್ಯರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು ಕರ್ನಾಟಕದ ಇತಿಹಾಸದಲ್ಲಿ ,ಧಾರ್ಮಿಕ ಕ್ಷೇತ್ರದಲ್ಲಿ ಇದೊಂದು ದೊಡ್ಡ ಮೈಲಿಗಲ್ಲಾಗಿ ದಾಖಲೆ ನಿರ್ಮಿಸಲಿದೆ. ಈಗಾಗಲೇ ಅಂತರ್ ರಾಷ್ಟೀಯ ಮಟ್ಟದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಹುದವಿ ಬಿರುದು ದಾರಿಗಳನ್ನು ಸದ್ರಿ ಸಂಸ್ಥೆಯು ಸಮಾಜಕ್ಕೆ ಅರ್ಪಿಸಲು ಅಣಿಯಾಗುತ್ತಿದ್ದು ಇನ್ನೆರಡು ವರ್ಷಗಳಲ್ಲಿ ಚೆಮ್ಮಾಡ್ ದಾರುಲ್ ಹುದಾ ಸಂಸ್ಥೆಯಿಂದ ಇಲ್ಲಿ ಕಲಿತ ವಿಧ್ಯಾರ್ಥಿಗಳು ಹುದವಿ ಪದವಿ ಪಡೆಯಲಿದ್ದಾರೆ. ತನ್ನ ಸಮರ್ಥ ನಾಯಕತ್ವದ ಮೂಲಕ ಜಿಲ್ಲೆಯಲ್ಲಿ ಸಮಸ್ತದ ಪ್ರಗತಿಗೆ ಹಲವು ರೀತಿಯ ಕೊಡುಗೆಯನ್ನು ನೀಡಿದ ಶೈಖುನಾ ಖಾಝಿ ತ್ವಾಖಾ ಉಸ್ತಾದರ ನೇತೃತ್ವದಲ್ಲಿ ಜಿಲ್ಲೆಯ ಹಲವು ಉಲಮಾ ಉಮರಾ ನಾಯಕರ ಅವಿಶ್ರಾಂತ ದುಡಿಮೆಯ ಫಲವಾಗಿ ಇಂದು ದಾರುನ್ನೂರು ಹೆಮ್ಮರವಾಗಿ ಬೆಳೆದು ನಿಂತಿದೆ. ಸಾರ್ವಜನಿಕರ ,ಸಮಸ್ತದ ಅನುಯಾಯಿಗಳ ,ಉದಾರಮತಿಗಳ ಸಹಾಯ ಸಹಕಾರ ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವುದರಲ್ಲಿ ಸಕ್ರಿಯ ಪಾತ್ರ ವಹಿಸಿದೆ. ಮುಂದೆಯೂ ಸಮುದಾಯದ ಸಹಾಯ ಸಹಕಾರ ಅಗತ್ಯವಿದೆ ಎಂದು ಖಾಝಿ ಉಸ್ತಾದರ ಪರವಾಗಿ ಅವರ ಪುತ್ರ ಹುಸೈನ್ ರಹ್ಮಾನಿ ಮನವಿ ಮಾಡಿಕೊಂಡಿದ್ದಾರೆ. ಉಪ್ಪಿನಂಗಡಿಗೆ ಅವರು ಬೇಟಿ ನೀಡಿದ ಸಂಧರ್ಭದಲ್ಲಿ ಸಂಸ್ಥೆಯ ರುವಾರಿಗಳಾದ ಹನೀಫ್ ಹಾಜಿ,ಮಾಜಿ ಮೇಯರ್ ಅಶ್ರಫ್,ಇಬ್ರಾಹಿಂ ಕೋಡಿಜಾಲ್ ಇದ್ದರು. ಸ್ಥಳೀಯವಾಗಿ ಎಸ್ ಬಿ ದಾರಿಮಿ ಉಸ್ತಾದ್,ಸಿದ್ದೀಖ್ ಹಾಜಿ ಮೇದರಬೆಟ್ಟು,ಡಬ್ಬಲ್ ಫೋರ್ ಮುಸ್ತಫಾ,ಕರಾವಳಿ ಹಮೀದ್,ಯೂನಿಕ್ ಅಬ್ದುಲ್ ರಹ್ಮಾನ್,ಇಬ್ರಾಹಿಂ ಅಗ್ನಾಡಿ,ಶುಕೂರ್ ಹಾಜಿ ಮೈನ,ನುಹ್ಮಾನ್,ಇಲ್ಯಾಸ್ ಮೊದಲಾದವರು ನಾಯಕರನ್ನು ಬರ ಮಾಡಿ ಕೊಂಡರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.