(www.vknews. in) ಹುಲಿಗಳ_ರಾಜಕೀಯ ಭಾಗ-1 ಕಾಂಗ್ರೆಸ್ ಮುಖಂಡ ಮಿಥುನ್_ರೈ ಸಾರಥ್ಯದ ಪಿಲಿ_ನಲಿಕೆ ಸ್ಪರ್ಧೆಯ ಸಮಾರಂಭದಲ್ಲಿ ಸಂಸದ ಬ್ರಿಜೇಶ್_ಚೌಟ ಮತ್ತು ಬಿಜೆಪಿ ಘಟಾನುಘಟಿಗಳು ಕಾಣಿಸಿಕೊಂಡದ್ದು ಮಾತ್ರವಲ್ಲದೆ ಮಿಥುನ್ ರೈ ಕಾರ್ಯವನ್ನು ಕೊಂಡಾಡಿರುವುದು ಹುಲಿ ಕುಣಿತ ರಾಜಕೀಯ ಮಗ್ಗುಲು ಪಡೆದುಕೊಂಡಿದೆ.
ತುಳುನಾಡು ಸಂಸ್ಕೃತಿ ವಿಚಾರ ಬಂದಾಗ ಯಾರೂ ರಾಜಕೀಯ ಮಾಡುವುದಿಲ್ಲ ಎಂಬ ಭರಪೂರ ಸಮರ್ಥನೆ ಒಂದೆಡೆಯಾದರೆ.. ಹಿಂದುತ್ವ ಹೇಳಿಕೊಂಡು ತಿರುಗಾಡುವ ಬಿಜೆಪಿ ನಾಯಕರುಗಳು ಪ್ರಖರ ಹಿಂದುತ್ವವಾದಿ ನಾಯಕ ಯುಪಿ ಸಿಂ ಯೋಗಿ_ಆದಿತ್ಯನಾಥರಿಗೆ ಚಪ್ಪಲಿಯಿಂದ ಹೊಡೆಯುವ ಹೇಳಿಕೆ,ಹಿಂದುತ್ವದ ಮೇರು ನಾಯಕ ಕಲ್ಲಡ್ಕ_ಪ್ರಭಾಕರ ಭಟ್ಟರಿಗೂ ನಿಂದಿಸಿದ ಮಿಥುನ್ ರೈಗಳು ಆಯೋಜಿಸಿದ ಪಿಲಿನಲಿಕೆಯಲ್ಲಿ ಹೋಗಿ ನುಲಿಯುವ ಅಗತ್ಯ ಇತ್ತೇ ಎಂದು ಹಿಂದೂ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ನಿಜ ರಾಜಕೀಯ ಬಿಟ್ಟು ನೋಡಿದರೆ ಮಿಥುನ್ ರೈಗಳು ವೈಯಕ್ತಿಕವಾಗಿ ದೈವಭಕ್ತರು, ತುಳು ನಾಡಿನ ಸಂಸ್ಕೃತಿಗೆ ಅಪಾರ ಪ್ರೋತ್ಸಾಹ ನೀಡುವವರು._ ಆದರೆ ರಾಜಕೀಯ ಎಂದು ಬಂದಾಗ ಸಿಕ್ಕ ಸಿಕ್ಕಲ್ಲಿ ಬಿಜೆಪಿಯವರ ಹಿಂದುತ್ವವನ್ನು ಹೀನಾಮಾನ ಟೀಕಿಸುವವರು.
ಅಧಿಕಾರ_ಸೂತ್ರ ರಾಜಕೀಯ ಪಕ್ಷಗಳು ಹಿಂದುತ್ವ ಮತ್ತು ಅಹಿಂದ ಅಭಿಯಾನದ ಮೂಲಕ ಅಧಿಕಾರ ಸೂತ್ರ ಕಂಡು ಕೊಂಡಿದ್ದರೆ ಕರಾವಳಿಯಲ್ಲಿ ಅಧಿಕಾರ ಹಿಡಿಯಲು/ ಸಮಾಜದಲ್ಲಿ ಪ್ರವರ್ಧಮಾನಕ್ಕೆ ಬರಲು ಗೋವು ಮತ್ತು ಹುಲಿಯನ್ನು ಆಶ್ರಯಿಸಿಸುವುದು ವಿಶೇಷ.ಕಂಬಳ ಸ್ಪರ್ಧೆ ಮತ್ತು ಹುಲಿವೇಷ ಸ್ಪರ್ಧೆ ಇತ್ತೀಚಿನ ಟ್ರೆಂಡ್.
ಬಿಜೆಪಿ ಪಕ್ಷದಲ್ಲಿ ಟಿಕೆಟ್ ಸಿಗಲು ಬಜರಂಗದಳ ನಾಯಕರಾಗಿ ಕೇಸ್ಗಳನ್ನು ಹಾಕಿಕೊಳ್ಳೋದು ಬಳಿಕ ಆರೆಸ್ಸೆಸ್ ಮೂಲ ಎನ್ನೋದು ಟ್ರೆಂಡ್ ಆಗಿತ್ತು _ಆದರೆ ಕೇಸ್ಗಳನ್ನು ಹಾಕಿಕೊಂಡು, ಬಿಸಿನೆಸ್ ಹಾಳುಮಾಡಿಕೊಂಡು ರಾಜಕೀಯ ಮಾಡೋದು ಬಹಳ ಕಷ್ಟ ಎಂದು ಕಂಡು ಕೊಂಡ ಬಳಿಕ ಇದೀಗ ಕಂಬಳ, ಹುಲಿ ಕುಣಿತ ಸ್ಪರ್ಧೆ ಟ್ರೆಂಡ್ ಆಗಿದೆ._ ಸೆಲೆಬ್ರಿಟಿ_ಹುಲಿಗಳು ಉಡುಪಿಯಲ್ಲಿ ಅಲ್ಲಲ್ಲಿ ವೇದಿಕೆ ನಿರ್ಮಿಸಿ ಅಲ್ಲಿ ಹುಲಿ ಕುಣಿತ ಪ್ರದರ್ಶನ ಮಾಡಿಸಿ ಅವರಿಗೆ ಸಂಭಾವನೆ, ಪಾರಿತೋಷಕ ನೀಡಲಾಗುತ್ತಿತ್ತು. ಮಂಗಳೂರಲ್ಲಿ ೧೯೯೬ರಲ್ಲಿ ಹುಲಿ ವೇಷ ಸ್ಪರ್ಧೆ ಆರಂಭಗೊಂಡಿತ್ತು. ಆದರೆ ಮಿಥುನ್ ರೈ ಅವರು ಐದು ವರ್ಷದ ಹಿಂದೆ ಪಿಲಿ ನಲಿಕೆ ಆರಂಭಿಸಿದ ಬಳಿಕ ಕಾರ್ಪೊರೇಟ್ ಸೆಲೆಬ್ರಿಟಿ ರಂಗು ಪಡೆಯಿತು. ಇದರ ಬೆನ್ನಲ್ಲಿಯೇ ಶಾಸಕ ವೇದವ್ಯಾಸ_ಕಾಮತ್ ಅವರು ಮಾಜಿ ಸಂಸದ ನಳಿನ್_ಕುಮಾರ್_ಕಟೀಲ್ ಅವರ ಮಾರ್ಗದರ್ಶನದಲ್ಲಿ ಪಿಲಿ ಪರ್ಬ ಭಾರಿ ವೈಭವದಿಂದ ನಡೆಯಿತು. ರಾಹುಲ್ ಗಾಂಧಿ ಕುರಿತು ನೋ ಕಮೆಂಟ್ಸ್ ಹೇಳಿದ ಬಳಿಕ ಬಿಜೆಪಿಗ ಚಡ್ಡಿ ಎಂದು ಕರೆಸಿಕೊಂಡಿರುವ ಕಾಂತಾರ ಖ್ಯಾತಿಯ ನಟ ರಿಷಬ್_ಶೆಟ್ಟಿ ಎರಡಕ್ಕೂ ಸ್ಟಾರ್ ಅಟ್ರ್ಯಾಕ್ಷನ್ !
ಮಿಥುನ್_ರೈಗಳು ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ಮಾಡಿದರೂ ಹಿಂದುತ್ವ ಬಿಜೆಪಿ ಮುಖಂಡರ ಜತೆ ಸಂಬಂಧ ಹಾಳುಮಾಡಿಕೊಂಡಿಲ್ಲ. ಕರಾವಳಿಯಲ್ಲಿ ಹಿಂದೂ ಸಂಸ್ಕೃತಿ ವಿರೋಧಿಸಿ ಗೆಲ್ಲಲು ಸಾಧ್ಯವೂ ಇಲ್ಲವಲ್ಲ.
ರೈಗಳ ಪಿಲಿನಲಿಕೆಗೆ ಬಂದು ಬಿಜೆಪಿಯ ಭಾಷಣ ಮಾಡಿರುವುದಕ್ಕೆ ತುಳುನಾಡು ಸಂಸ್ಕೃತಿಯ ಒಗ್ಗಟ್ಟು ಕಾರಣ ಎಂದು ಮೇಲುನೋಟಕ್ಕೆ ಬಿಂಬಿಸಲಾಗುತ್ತಿದ್ದರೂ ಒಳನೋಟದಲ್ಲಿ ಶಾಸಕ ಕಾಮತ್ ಮತ್ತು ನಳಿನ್ ಕಟೀಲ್ ಪಿಲಿ ಪರ್ಬದ ರಾಜಕೀಯಕ್ಕೆ ಟಾಂಗ್ ಕೊಟ್ಟಿರಲೂ ಬಹುದಾಗಿದೆ. ಪಿಲಿನಲಿಕೆ ವೇದಿಕೆಯಲ್ಲಿ ನಳಿನ್ ರಾಜಕೀಯ ವಿರೋಧಿ, ಪ್ರಬಲ ನಾಯಕ ಸತ್ಯಜಿತ್_ಸುರತ್ಕಲ್ ಕೂಡಾ ಕಾಣಿಸಿಕೊಂಡಿರುವುದನ್ನು ಎಲ್ಲರೂ ಮತ್ತೆ ಮತ್ತೆ ಸ್ಮರಿಸಬೇಕು
ಇದರ ಜತೆಯಲ್ಲಿ ಬಿರುವೆರ್_ಕುಡ್ಲ ಸಂಘಟನೆ ಕೂಡಾ ಈ ಬಾರಿ ಹುಕು ಕುಣಿತದ ಊದು ಪೂಜೆಗೆ ಮುಂಬಯಿ ಉದ್ಯಮಿ ಮಹೇಶ್_ಶೆಟ್ಟಿ_ತೆಳ್ಳಾರ್ ಅವರ ಮೂಲಕ ಬಾಲಿವುಡ್ ಸ್ಟಾರ್ ಸಂಜಯದತ್ ಅವರನ್ನು ಕರೆಸಿದ್ದು ಮಾತ್ರವಲ್ಲದೆ ಊರು ತುಂಬಾ ಅಬ್ಬರದ ಪ್ರಚಾರ ನಡೆಸಿದ್ದಾರೆ. ಮಂಗಳೂರು_ದಸರಾ ಸೃಷ್ಪಿಯ ಕುದ್ರೋಳಿ ಕ್ಷೇತ್ರದಲ್ಲಿಯೂ ಬಿರ್ವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ, ಸಂಜೂ ಬಾಬ ಮತ್ತು ಹುಲಿಗಳು ಎಲ್ಇಡಿ ಸ್ಕ್ರೀನ್ಗಳ ಮೂಲಕ ಅಬ್ಬರಿಸಿದ್ದು ವಿಶೇಷ.
– ಜಿತೇಂದ್ರ ಕುಂದೇಶ್ವರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.