(www.vknews. in) ಕಾಂಗ್ರೆಸ್_ಹುಲಿ- ಬಿಜೆಪಿ_ಹುಲಿಗಳ ಮೈತ್ರಿ ಎಷ್ಟು ಸತ್ಯ! ಹುಲಿ ಬೇಟೆಗಾರ ಯಾರು ?
ಹುಲಿ_ಬೇಟೆ
ಮಂಗಳೂರಿನಲ್ಲಿ ಪ್ರಸಿದ್ದಿ ಪಡೆದಿರುವ ಮಂಗಳೂರು ದಸರಾ ಇದರ ರೂವಾರಿ ಜನಾರ್ದನ_ಪೂಜಾರಿ ಅವರು ! ಕೂಡ ಕಾಂಗ್ರೆಸಿಗರು ಹಾಗಂತ ಅದರಲ್ಲಿ ಬಿಜೆಪಿಯವರು ಭಾಗವಹಿಸುವುದು ಕೂಡ ಇವರ ಪ್ರಕಾರ ತಪ್ಪಾ? ಎಂಬ ಬಲವಾದ ಸಮರ್ಥನೆಯೊಂದಿಗೆ ಬೆಂಬಲಿಗರು ಬಿಜೆಪಿಯ ಚೌಟರು, ಕುಂಪಲರು ಮಾಡಿದ್ದು ಸರಿ ಎಂಬ ವಾದಕ್ಕೆ ಇಳಿದಿದ್ದಾರೆ.
ಸ್ವಪಕ್ಷೀಯ ವಿರೋಧಿ ಬಣದವರೇ ಚೌಟ, ಕುಂಪಲ, ಮಲ್ಯರ ತೇಜೋವಧೆಗೆ ಇಳಿದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ! ಅವರು ಬೆರಳು ತೋರುತ್ತಿರುವುದು ಬಹುಷಃ ನಳಿನ್-ಕುಮಾರ್-ಕಟೀಲ್ ಬೆಂಬಲಿಗರ ಕುರಿತಾಗಿರಬಹುದು ! ಬಿಜೆಪಿಯವರದು ಖಂಡಿತಾ ಅದು ತಪ್ಪಲ್ಲ ಎಂದರೆ ತಪ್ಪಲ್ಲ. ತಪ್ಪು ಎಂದರೆ ತಪ್ಪು ! ಯಾವುದೇ ಪುಣ್ಯ ಕ್ಷೇತ್ರದಲ್ಲಿ ಕಾಂಗ್ರೆಸಿಗರು ಟ್ರಸ್ಟಿಯಾಗಿದ್ದಾರೆ ಎಂದು ಬಿಜೆಪಿಯವರು ದೇವಸ್ಥಾನಕ್ಕೆ ಹೋಗಬಾರದು ಎಂದು ಯಾವ ಆರೆಸ್ಸೆಸ್/ ಬಿಜೆಪಿ ಮುಖಂಡರೂ ಹೇಳುವುದಿಲ್ಲ. ಅದೂ ಅಲ್ಲದೆ ಕುದ್ರೋಳಿ_ಕ್ಷೇತ್ರದಲ್ಲಿ ವೈದಿಕ ಸನಾತನ/ ಕಲೆ ಸಂಸ್ಕೃತಿ ಮೈಲ್ಮೈಯಲ್ಲಿರುವ ಪುಣ್ಯ ಕ್ಷೇತ್ರ, ಜನಾರ್ದನ ಪೂಜಾರಿಯವರೂ ದೈವ ಭಕ್ತರು ಮಾತ್ರವಲ್ಲದೆ ಪರಿಶುದ್ಧ/ ಪ್ರಾಮಾಣಿಕ ಮನಸ್ಸಿನವರು.
ಅವರು ಸಿದ್ದಾಂತದಲ್ಲಿ ವಿರುದ್ಧ ಧ್ರುವದಂತಿರುವ ಕಲ್ಲಡ್ಕ ಪ್ರಭಾಕರ ಭಟ್ಟರನ್ನೂ ಆಹ್ವಾನಿಸಿ, ಸ್ವಾಗತಿಸಿದ್ದರು. ಅವರೆಂದು, ಧರ್ಮ- ಸಂಸ್ಕೃತಿಯಲ್ಲಿ ರಾಜಕಾರಣ ಮಾಡಲೇ ಇಲ್ಲ ಬಿಡಿ. ಹುಲಿ_ಕುಣಿತ ಸ್ಪರ್ಧೆ ಕುರಿತು ವಿಶ್ಲೇಷಿಸುವುದಾದರೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೃತೃತ್ವದ ಪಿಲಿ ನಲಿಕೆ ತುಳುನಾಡ ಸಂಸ್ಕೃತಿ ವಿಜೃಂಬಿಸುವುದರ ಜತೆ ವೈಯಕ್ತಿಕ ವರ್ಚಸ್ಸು ರಾಜಕೀಯ ಮೇಲ್ಮೈ ಸಾಧಿಸುವ ಉದ್ದೇಶ ಇದ್ದೇ ಇರುತ್ತದೆ, ತಪ್ಪಲ್ಲ.
ತುಳುನಾಡಿನಲ್ಲಿ ಆಸ್ತಿಕರ ಸಂಖ್ಯೆ ದೊಡ್ಡದಿದೆ. ಇವರು ಮತದಾರರು ಕೂಡಾ. ಕಾಂಗ್ರೆಸಿಗರು ಹಿಂದುತ್ವ ಸಮಾವೇಶ ಮಾಡಿ ಈ ಆಸ್ತಿಕರನ್ನು ಒಟ್ಟುಗೂಡಿಸಲು ಸಾಧ್ಯವಿಲ್ಲ. ತುಳುನಾಡಿನ ಧರ್ಮ ಸಂಸ್ಕೃತಿಯಾದ ಕಂಬಳ, ಪಿಲಿ ನಲಿಕೆಯಲ್ಲಿ ಎಲ್ಲರೂ ಒಟ್ಟಾಗುತ್ತಾರೆ. ಈ ಸತ್ಯ ಅರಿತಿರುವ ರೈಗಳು ತಮ್ಮ ಮತ್ತು ಕಲಾವಿದರ ಏಳಿಗೆಗಾಗಿ ಒಳ್ಳೆಯ ರೀತಿಯಿಂದ ಪಂಥ ನಡೆಸುತ್ತಿದ್ದಾರೆ.
_ಯುವಜನರ ಕ್ರೇಜ್ ಮತ್ತು ಈ ಯಶಸ್ಸು ನೋಡಿ ತಮ್ಮ ಕಾರ್ಯಕರ್ತರಿಗೂ ಹುಮ್ಮಸ್ಸು ತುಂಬಿಸಲು ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತರ ತಂಡ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಎರಡು ವರ್ಷಗಳಿಂದ ಪಿಲಿ ಪರ್ಬ ಆಯೋಜಿಸುತ್ತಿದೆ. ಎರಡೂ ಕೂಡಾ ಕಾಂಗ್ರೆಸ್ ಪಿಲಿ ಮತ್ತು ಬಿಜೆಪಿ ಪಿಲಿ ಎನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ._
ಆಯಾ_ಪಕ್ಷದ_ಕಾರ್ಯಕರ್ತರಿಗೆ ಬೂಸ್ಟ್ ಕೊಡುವ, ಪಕ್ಷದ ನಾಯಕರಿಗೆ ವರ್ಚಸ್ಸು ನೀಡುವ ಈ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪಕ್ಷದ ನಾಯಕರು ಜತೆಗೆ ದೊಡ್ಡ ಜವಾಬ್ದಾರಿ ಇರುವವರು ಹೋಗುವುದು, ಹೋಗಿ ವೇದಿಕೆ ಏರುವುದು, ಬಹುಮಾನ ವಿತರಣೆ ಮಾಡುವುದು ಮತ್ತು ವೇದಿಕೆಯಲ್ಲಿ ಎದುರಾಳಿ ಪಕ್ಷದ ನಾಯಕನನ್ನು ಹೊಗಳುವುದು ಅದನ್ನು ಲೈವ್ ಆಗಿ ಜನ ನೋಡುವುದು… ಎಷ್ಟು ಸರಿ ಎನ್ನುವುದು_ನಾವು ಹೇಳುವುದಲ್ಲ, ಅವರವರೇ ಖುದ್ದು ಪರಾಮರ್ಶೆ ಮಾಡಿಕೊಳ್ಳಬೇಕು._ #ರಾಜಕೀಯವನ್ನು ಮಾಡುವಲ್ಲಿ #ಮಾಡಬೇಕು. ಎಲ್ಲಾ ಕಡೆ ಅಲ್ಲಾ ಎನ್ನೋದೂ ನಿಜ. ಆದರೆ ರಾಜಕೀಯ ಲಾಭವೇ ಮೂಲೋದ್ದೇಶವಾಗಿ ಉಳ್ಳ ಕಾರ್ಯಕ್ರಮಗಳಲ್ಲಿ ಎದುರಾಳಿ ಪಕ್ಷದ ನಾಯಕರು ಭಾಗಿಯಾಗುವುದರಿಂದ ಸ್ವಂತ ಪಕ್ಷಕ್ಕೇ ನಷ್ಟ ಆಗುವುದು ಹೊರತು ಇದನ್ನು ವಿಶ್ಲೇಷಿಸುವವರಿಗಲ್ಲ.
ಮೂಡುಬಿದರೆ_ರಾಜಕೀಯ ಮಿಥುನ್ ರೈಗಳು ಮೂಡುಬಿದರೆ ಕ್ಷೇತ್ರದಲ್ಲಿ ರಾಜಕೀಯ ಮಾಡ್ತಾರೆ, ಸರಕಾರಿ ಕಂಬಳ ಮಾಡುವಾಗ ನಮ್ಮನ್ನು ಕರೆಯುವುದಿಲ್ಲ, ಜಿಲ್ಲಾಡಳಿತ ಕಾಂಗ್ರೆಸ್ ನಾಯಕರ ಕೈಗೊಂಬೆ ಎಂದು ಮೂಡುಬಿದರೆ ಶಾಸಕ ಕೋಟ್ಯಾನ್ರು ಪ್ರೆಸ್ ಮೀಟ್ ಕರೆದು ಗೋಗರೆಯುವುದು ಇದರಲ್ಲಿ ಜಿಲ್ಲಾಧ್ಯಕ್ಷರು, ಸಂಸದರು, ಶಾಸಕರು ಭಾಗವಹಿಸಿ ಇಂಥ ಕೃತ್ಯಗಳನ್ನು ಎಷ್ಟು ಮಾತ್ರಕ್ಕೂ ಸಹಿಸುವುದಿಲ್ಲ ಎನ್ನುವುದು ಬಳಿಕ ಪ್ರತಿಭಟನೆ ಬೆದರಿಕೆ ಒಡ್ಡೋದು.. ಸಂಸ್ಕೃತಿಯಲ್ಲಿ ರಾಜಕೀಯ ಮಾಡುವುದಿಲ್ಲ ಎನ್ನುವವರಿಗೆ ,, ಇವೆಲ್ಲಾ ಬೇಕಾ ಎನಿಸೋದು ಸಹಜ. ಈ ಕಂಬಳ ಕೂಡಾ ತುಳುನಾಡಿನ ಸಂಸ್ಕೃತಿ ಅಲ್ವೇ ಇಲ್ಲಿ ರಾಜಕೀಯ ಆಗಿದೆ ಎನ್ನುವವರು ಪಿಲಿ ನಲಿಕೆಯ ಖೆಡ್ಡಾಕ್ಕೆ ಹೋಗಿ ಬೀಳುವುದು ಏಕೆ ? ಇಲ್ಲಿ ಸಣ್ಣ_ಒಳ_ರಾಜಕೀಯ ವೂ ಇದೆ. ಮತ್ತೊಂದು ಮೂರನೇ_ತಿರುವೂ ಇದೆ. ಬಿರುವೆರ್_ಕುಡ್ಲ ಪಿಲಿ ಊದುಪೂಜೆ ಜಿತೇಂದ್ರ ಕುಂದೇಶ್ವರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.