(www.vknews. in) ಕಾಪು ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ ಹಾಗೂ ಕಿಟ್ ವಿತರಣೆ
ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕಾಪು ಕಮ್ಯೂನಿಟಿ ಹಾಲ್ ನಲ್ಲಿ ವತಿಯಿಂದ ನಡೆದ ಸಾಮೂಹಿಕ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮ ಹಾಗೂ ಕಿಟ್ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.ಸುಮಾರು ಇಪ್ಪತ್ತೊಂದು ಮಕ್ಕಳಿಗೆ ನುರಿತ ವೈದ್ಯರಿಂದ ಮುಂಜಿ ಕಾರ್ಯ ನಡೆಸಲಾಯಿತು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿದ್ದರು, ಕಾರ್ಯಕ್ರಮ ಉದ್ದೇಶಿಸಿ ಜಮೀಯತುಲ್ ಫಲಾಹ್ ಕಾಪು ತಾಲೂಕು ಅಧ್ಯಕ್ಷ ಶಬೀ ಅಹಮ್ಮದ್ ಖಾಝಿ ಮತ್ತು ನಮ್ಮ ನಾಡ ಒಕ್ಕೂಟ ಕುಂದಾಪುರ ತಾಲೂಕು ಅಧ್ಯಕ್ಷರಾದ ದಸ್ತಗೀರ್ ಸಾಹೇಬ್ ಮಾತನಾಡಿದರು, ಮುಖ್ಯ ಅತಿಥಿಯಾಗಿ ನಮ್ಮ ನಾಡ ಒಕ್ಕೂಟದ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಪೀರ್ ಮಹಮ್ಮದ್, ಜಿಲ್ಲಾ ಸಮಿತಿ ಕ್ರೀಡಾ ಕಾರ್ಯದರ್ಶಿ ಟಿ ಎಂ ಜಾಫ್ರುಲ್ಹಾ ಹೂಡೆ,ಜಿಲ್ಲಾ ಉಪಾಧ್ಯಕ್ಷ ಅಬೂ ಮಹಮ್ಮದ್ ಕುಂದಾಪುರ, ಯು. ಎ.ರಶೀದ್, ಜಿಲ್ಲಾ ಸಮಿತಿ ಸದಸ್ಯರಾದ ನಿಹಾರ್ ಕುಂದಾಪುರ,ಮೊಹಮ್ಮದ್ ಇರ್ಫಾನ್, ಫಾರೂಕ್ ಚಂದ್ರನಗರ , ಡಾII ಸಿದ್ದೀಕ್ ಅಡ್ಡೂರು,ಕಾಪು ತಾಲೂಕು ಸಮಿತಿ ಆಸಿಫ್ ಕಾಪು, ತಪು ತಾಲೂಕು ಕೋಶಾಧಿಕಾರಿ ಮೊಹಮ್ಮದ್ ಇರ್ಷಾದ್, ಉಪಸ್ಥಿತರಿದ್ದರು. ಸೆಂಟ್ರಲ್ ಕಮಿಟಿ ಪ್ರದಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮದ್ ರಶಾದಿ ದುವಾ ನೆಡೆಸಿದ್ದರು.ಕಾಪು ತಾಲೂಕು ಅಧ್ಯಕ್ಷರಾದ ಆಶ್ರಫ್ ಪಡುಬಿದ್ರಿಯವರು ಸ್ವಾಗತಿಸಿದರು, ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಯೂಸುಫ್ ಕಾರ್ಯಕ್ರಮವನ್ನು ನಿರೂಪಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಝಾಹೀರ್ ನಾಖುದ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.