(www.vknews. in) ಬಂಟ್ವಾಳ ಪುರಸಭೆ ನ.23 ರಂದು ಉಪ ಚುನಾವಣೆ, ನ.26 ರಂದು ಫಲಿತಾಂಶ
ಬಂಟ್ವಾಳ : ಬಂಟ್ವಾಳ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ರಾಜ್ಯ ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಿದ್ದು, ನ. 23 ರಂದು ಮತದಾನ ನಡೆಯಲಿದ್ದು ನ. 26ಕ್ಕೆ ಫಲಿತಾಂಶ ಹೊರ ಬೀಳಲಿದೆ.
ಬಂಟ್ವಾಳ ಪುರಸಭೆಯ ವಾರ್ಡ್ 2 ರ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದ ಗಂಗಾಧರ್ ಅವರು ಲೋಕಸಭಾ ಚುನಾವಣೆಯ ಸಂದರ್ಭ ಪಕ್ಷ ತೊರೆದು ಬಿಜೆಪಿ ಸೇರಿದ್ದು, ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಏಕೈಕ ನಗರ ಸ್ಥಳೀಯಾಡಳಿತಕ್ಕೆ ಚುನಾವಣೆ ನಡೆಯುತ್ತಿದೆ.
ನ. 4ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನ. 11 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ. 12 ರಂದು ನಾಮಪತ್ರ ಪರಿಶೀಲನೆ, ನ. 14 ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನ. 23ರಂದು ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಚುನಾವಣೆ ನಡೆದು, ನ. 25 ಅವಶ್ಯವಿದ್ದರೆ ಮರು ಮತದಾನಕ್ಕೆ ಮೀಸಲು ದಿನವಾಗಿದೆ. ನ. 26ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
*ಗ್ರಾ.ಪಂ.ಗಳಿಗೆ ಉಪಚುನಾವಣೆ*
ಗ್ರಾಮ ಪಂಚಾಯತುಗಳಲ್ಲೂ ಹಲವು ಕಾರಣಕ್ಕೆ ತೆರವಾಗಿರುವ ಸ್ಥಾನಗಳಿಗೂ ಉಪ ಚುನಾವಣೆ ಘೋಷಣೆಯಾಗಿದ್ದು, ನ. 23ರಂದು ಮತದಾನ ನಡೆದು, ನ. 26 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪಂ. ನ 3 ಸ್ಥಾನ, ಪಂಜಿಕಲ್ಲು 2, ಮಂಚಿ, ಪೆರ್ನೆ, ಚೆನ್ನೆತ್ತೋಡಿ, ಸಜೀಪಮೂಡ, ಅಮ್ಟಾಡಿ, ಬಡಗಬೆಳ್ಳೂರು ಗ್ರಾ.ಪಂ.ಗಳ ತಲಾ 1 ಸ್ಥಾನ, ಬೆಳ್ತಂಗಡಿ ತಾಲೂಕಿನ ಉಜಿರೆ, ಕುವೆಟ್ಟು, ಇಳಂತಿಲ ಗ್ರಾ.ಪಂ.ಗಳ ತಲಾ 1 ಸ್ಥಾನ, ಸುಳ್ಯ ತಾಲೂಕಿನ 22-ಕೊಲ್ಲಮೊಗ್ರು, ಮಂಡೆಕೋಲು, ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಗಳ ತಲಾ 1 ಸ್ಥಾನ, ಕಡಬ ತಾಲೂಕಿನ ಸುಬ್ರಹ್ಮಣ್ಯ, ಕುಟ್ರುಪ್ಪಾಡಿ ಗ್ರಾ.ಪಂ.ಗಳ ತಲಾ 1 ಸ್ಥಾನ, ಪುತ್ತೂರು ತಾಲೂಕಿನ ಅರಿಯಡ್ಕ, ಕೆದಂಬಾಡಿ ಗ್ರಾ.ಪಂ.ಗಳ ತಲಾ 1 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ನ.6ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನ. 12 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ. 13ರಂದು ನಾಮಪತ್ರ ಪರಿಶೀಲನೆ, ನ. 15ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನ. ರಂದು 23 ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಚುನಾವಣೆ ನಡೆದು, ನ. 25 ಅವಶ್ಯವಿದ್ದರೆ ಮರು ಮತದಾನಕ್ಕೆ ಮೀಸಲು ದಿನವಾಗಿದೆ. ನ. 26 ರಂದು ಆಯಾಯ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.