ಅಜ್ಜಿನಡ್ಕ (www.vknews.com) : ಕೋಟೆಕಾರು ಪಟ್ಟಣ ಪಂಚಾಯಿತಿ ನ 16 ನೆ ವಾರ್ಡ್ ನ ಕಾಂಗ್ರೆಸ್ ಕಾರ್ಯಕರ್ತರ ಸಭೆ ಯು ಮುಳ್ಳು ಗುಡ್ಡೆಯಲ್ಲಿ ಜರುಗಿತು, ಸಭೆಯ ಅಧ್ಯಕ್ಷತೆ ಯನ್ನು ವಾರ್ಡ್ ನ ಅಧ್ಯಕ್ಷರಾದ ಇಸ್ಮಾಯಿಲ್ ಮುಳ್ಳು ಗುಡ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿಕಟಪೂರ್ವ ತಾಲುಕು ಪಂಚಾಯಿತ್ ಅಧ್ಯಕ್ಷ ರಾದ ಮೊಹಮ್ಮದ್ ಮೊಣುರವರು ಮುಂದಿನ ಪಟ್ಟಣ ಪಂಚಾಯಿತ್ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಿನಂತಿಸಿದರು.ಸಭೆಯನ್ನು ಉದ್ದೇಶಿಸಿ, ಮುನ್ನೂರು ಪಂಚಾಯಿತಿ ಅಧ್ಯಕ ವಿಲ್ಸನ್ ಡಿ,ಸೋಜ, ಅಹಮದ್ ಅಜ್ಜಿನಡ್ಕ, ಅಬ್ಬಾಸ್ ಮುಳ್ಳು ಗುಡ್ಡೆ ಮುಂತಾದವರು ಭಾಷಣ ಮಾಡಿದರು.
ಸಭೆಯಲ್ಲಿ ವಾರ್ಡ್ ನ ಪಕ್ಷ ದ ಉಪಾಧ್ಯಕ್ಷರಾದ, ನಜೀರ್ ಮೊಣು, ಬಷೀರ್ ಮುಳ್ಳು ಗುಡ್ಡೆ, ಅನ್ವರ್ ಮುಳ್ಳು ಗುಡ್ಡೆ , ಯೂತ್ ಕಾಂಗ್ರೆಸ್ ನ ಅಧ್ಯಕ್ಷ ರಾದ ತನಾಝ್ ಅಜ್ಜಿನಡ್ಕ, ಕಾರ್ಯದರ್ಶಿ ಗಳಾದ ಪುತ್ತುಬಾವ, ಮುಸ್ತಫಾ ಹಿದಾಯತ್ ನಗರ ಮುಂತಾದವರು ಭಾಗವಹಿಸಿದ್ದರು.ಪ್ರಥಮವಾಗಿ ಪ್ರಧಾನ ಕಾರ್ಯದರ್ಶಿ ಬಾತೀಷ್ ಅಜ್ಜಿ ನಡ್ಕ ಸ್ವಾಗತಿಸಿ ಕೋಶಾಧಿಕಾರಿ ಜಮಾಲ್ ಅಜ್ಜಿನಡ್ಕ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.