ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): ರಾಜ್ಯದ ಗ್ರಾಮೀಣ ಪತ್ರಕರ್ತರ 20 ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿ, ಉಚಿತ ಬಸ್ ಪಾಸ್ ಸೌಲಭ್ಯ ಘೋಷಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾ ಕರ್ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಧನ್ಯವಾದ ಸಲ್ಲಿಸಿದ್ದಾರೆ. ಗ್ರಾಮೀಣ ಪತ್ರಕರ್ತರ ನಿರಂತರ ಹೋರಾಟ,ಮನವಿಗೆ ಕಡೆಗೂ ಸರ್ಕಾರ ಸ್ಪಂದಿಸಿದ್ದು, ಇದೀಗ ಬಜೆಟ್ನಲ್ಲಿ ಉಚಿತ ಬಸ್ಪಾಸ್ ನೀಡುವ ಘೋಷಣೆ ಹೊರ ಬಿದ್ದಿದೆ, ಈ ಆದೇಶ ಹೊರಬರಲು ಸರ್ಕಾರದ ಮೇಲೆ ಒತ್ತಡ ತಂದಿರುವ ಗ್ರಾಮೀಣ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಬದುಕು,ಬವಣೆಯ ಅರಿವಿರುವ ಕೆ.ವಿ.ಪ್ರಭಾಕರ್ ಅವರ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ.
ಈ ಹಿಂದೆ ಆರೋಗ್ಯಕಾರ್ಡ್ ಹಾಗೂ ಪತ್ರಕರ್ತರಿಗೆ ಪಿಂಚಣಿ ವ್ಯವಸ್ಥೆಯ ಘೋಷ ಣೆಯಂತೆ ಉಚಿತ ಬಸ್ ಪಾಸ್ ಬರಿ ಘೋಷಣೆಯಾಗದೇ ಅದರ ಸಮರ್ಪಕ ಜಾರಿಗೆ ಶಕ್ತಿ ಯೋಜನೆ ಮಾದರಿಯಲ್ಲೇ ಸರ್ಕಾರ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಯೋಜನೆಯಿಂದ ಎಲ್ಲಾ ಗ್ರಾಮೀಣ ಕಾರ್ಯನಿರತ ಪತ್ರಕರ್ತರಿಗೂ ಸೌಲಭ್ಯ ಸಿಗು ವಂತಾಗಬೇಕು,ನಿಯಮಗಳು ಸರಳವಾಗಿದ್ದು, ಅತಿಶೀಘ್ರ ಜಾರಿಯಾಗಬೇಕು ಎಂದು ಮನವಿ ಮಾಡಿರುವ ಅವರು, ಅವೈಜ್ಞಾನಿಕ ನಿಯಮಗಳನ್ನು ರೂಪಿಸಿ, ಕಾರ್ಯನಿರತ ಪತ್ರಕರ್ತರನ್ನು ಸೌಲಭ್ಯದಿಂದ ವಂಚಿಸುವಂತಾಗದೇ ಎಲ್ಲರಿಗೂ ಇದರ ಪ್ರಯೋಜನ ಸಿಗುವಂತೆ ಮಾಡಿ ಎಂದು ಜಿಲ್ಲೆಯ ಪತ್ರಕರ್ತರ ಪರವಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಸುರೇಶ್ ಕುಮಾರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್, ವಿ ಮುನಿರಾಜು ಮನವಿ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.