(www.vknews.com) : ಟೀಮ್ ಬಿ-ಹ್ಯೂಮನ್(ರಿ) ಮಂಗಳೂರು ಇದರ ವತಿಯಿಂದ ಜಮೀಯತುಲ್ ಫಲಾಹ್ ಮಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೋಸೈಟಿ ಹಾಗೂ ಟೀಂ ಮೇಕ್-ಎ-ಚೇಂಜ್ ಇದರ ಸಹಭಾಗಿತ್ವದಲ್ಲಿ ಉಚಿತ ಕೋರೋನ ಲಸಿಕಾ ಶಿಬಿರವು ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ನಲ್ಲಿ ದಿನಾಂಕ 3-09-2021 ರಂದು ಯಶಸ್ವಿಯಾಗಿ ನೆರವೇರಿತು.
ಜನರು ಕೊರೊನಾ ವೈರಸ್ ಮೂರನೇ ಅಲೆಯ ಭೀತಿಯಲ್ಲಿರೋ ಈ ಸಮಯದಲ್ಲಿ ಇದನ್ನು ತಡೆಗಟ್ಟುವ ಸಲುವಾಗಿ ಟೀಂ ಬಿ-ಹ್ಯೂಮನ್ ತಂಡವು ಅತ್ಯಂತ ಮುತುವರ್ಜಿ ವಹಿಸಿ ಈ ಲಸಿಕಾ ಶಿಬಿರವನ್ನು ಹಮ್ಮಿಕೊಂಡಿತ್ತು.
ಅತ್ಯಂತ ಯಶಸ್ವಿಯಾಗಿ ನಡೆದಂತಹ ಲಸಿಕಾ ಶಿಬಿರದಲ್ಲಿ ಸುಮಾರು 660 ಜನಸಾಮಾನ್ಯರು,ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು ಕೂಲಿ ಕಾರ್ಮಿಕರು ಹಾಗೂ ಇತರ ಶ್ರಮಿಕ ವರ್ಗದವರು ತಮ್ಮ ಪ್ರಥಮ ಮತ್ತು ಕೆಲವರು ತಮ್ಮ ದ್ವಿತೀಯ ಡೋಸ್ ಲಸಿಕೆಯನ್ನು ಪಡೆದರು.ಈ ಸಂದರ್ಭದಲ್ಲಿ ಕೆಲವು ಹಿರಿಯ ರೋಗಿಗಳು ಶಿಬಿರದ ಸ್ವಯಂಸೇವಕರ ವಾಹನದ ಮೂಲಕ ಆಗಮಿಸಿ ಲಸಿಕೆಯನ್ನು ಪಡೆದಿದ್ದು ವಿಶೇಷವಾಗಿತ್ತು.
ಕೇವಲ ಕೆಲವೇ ದಿನಗಳ ಹಿಂದೆ ಸಲ್ಲಿಸಿದ್ದ ಕೋರಿಕೆಯನ್ನು ಮನ್ನಿಸಿ ಈ ಶಿಬಿರವನ್ನು ಆಯೋಜಿಸಲು ಸಹಕರಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಹಾಗೂ ಸ್ಥಳೀಯ ಕಾರ್ಪೊರೇಟರ್ ಶ್ರೀ ಸಂದೀಪ್ ಗರೋಡಿ ಯವರಿಗೆ ಟೀಂ ಬಿ-ಹ್ಯೂಮನ್ ಇದರ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರು ಅನಂತಾನಂತ ಧನ್ಯವಾದಗಳನ್ನು ಸಮರ್ಪಿಸಿದರು .
ಅತ್ಯಂತ ವ್ಯವಸ್ಥಿತವಾಗಿ ಆಯೋಜನೆಗೊಂಡಿದ್ದ ಈ ಶಿಬಿರದಲ್ಲಿ ಬೆಳಿಗ್ಗೆಯಿಂದಲೇ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಇದರಲ್ಲಿ ಕೇವಲ 660 ಮಂದಿಗಷ್ಟೇ ಲಸಿಕೆ ಲಭ್ಯವಾಗಿತ್ತು ಹಾಗೂ ಬಾಕಿ ಉಳಿದವರು ನಿರಾಶೆಯಿಂದ ಹಿಂತಿರುಗಬೇಕಾಯಿತು.ಇಲ್ಲಿ ಸೇರಿರುವ ಬೃಹತ್ ಜನಸ್ತೋಮವನ್ನು ಗಮನಿಸಿದಾಗ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆಯನ್ನು ಪಡೆದಿಲ್ಲ ಎಂಬುದು ಮನವರಿಕೆಯಾಗಿದ್ದು ಮಂಗಳೂರು ನಗರದಾದ್ಯಂತ ಇಂತಹ ಹಲವು ಉಚಿತ ಲಸಿಕ ಶಿಬಿರಗಳನ್ನು ಏರ್ಪಡಿಸಲು ಅನುವು ಮಾಡಿಕೊಡುವಂತೆ ಶಾಸಕರಲ್ಲಿ ಆಸಿಫ್ ಡೀಲ್ಸ್ ರವರು ಕೇಳಿಕೊಂಡರು.
ಕರೋನ ವೈರಸ್ ಅಲೆಯು ತೀವ್ರವಾಗಿ ವ್ಯಾಪಿಸಿದ ದಿನಗಳಿಂದಲೂ ನಿರಂತರವಾಗಿ ಈ ರೀತಿಯ ಉಚಿತ ಲಸಿಕಾ ಶಿಬಿರಗಳನ್ನು, ರಕ್ತದಾನ ಶಿಬಿರಗಳನ್ನು ,ರೋಗಿಗಳಿಗೆ ಉಪಯುಕ್ತ ಮಾಹಿತಿ ಶಿಬಿರಗಳನ್ನು ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳ ಸ್ಯಾನಿಟೈಸೇಶನ್ ಕಾರ್ಯಗಳನ್ನು ಟೀಂ ಬಿ-ಹ್ಯೂಮನ್ ತಂಡವು ಅತ್ಯಂತ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.
ಈ ಕಾರ್ಯಕ್ರಮದಲ್ಲಿ ಟೀಂ ಬಿ-ಹ್ಯೂಮನ್ ನ ತಮೀಂ, ಇರ್ಷಾದ್ ಕಂದಕ್, ನಜ್ಜಿ ಕಂದಕ್, ದಾವೂದ್, ಅಹ್ನಾಫ್ ಡೀಲ್ಸ್, ಮುಫ್ತಿ, ಅದ್ನಾನ್, ದುೃವ್, ಉದಯ್, ಸಾದಿಕ್, ತೌಸಿಫ್, ಇಮ್ರಾನ್, ಮಣಿಕಂಟ ಮುಂತಾದವರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಹಾಗೆಯೇ ಟೀಂ ಮೇಕ್-ಎ-ಚೇಂಜ್ ನ ಸುಹೈಲ್ ಕಂದಕ್, ಅಫ್ರೀದ್, ಮಿಶಾಬ್, ರಿಹಾನ್, ನಿಯಾನ್, ಶಕೀಲ್, ರೆಡ್ ಕ್ರಾಸ್ ನ ಪ್ರವೀಣ್ ಮತ್ತವರ ತಂಡವು ಈ ಕಾರ್ಯಕ್ರಮದ ಯಶಸ್ವಿಗೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.