(www.vknews.in) : 2023-24ನೇ ಸಾಲಿನ ಸಮಸ್ತ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕಾವು ನೂರುಲ್ ಇಸ್ಲಾಂ ಸೆಕಂಡರಿ ಮದರಸ ವಿದ್ಯಾರ್ಥಿನಿಗಳು ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆ ಹೊಂದಿ ಮಾಡನೂರು ರೇಂಜ್ ಮಟ್ಟದಲ್ಲಿ ದ್ವಿತೀಯ ಹಾಗು ತೃತೀಯ ಸ್ಥಾನ ಗಳಿಸಿದ್ದಾರೆ.
ಸಿ.ಹೆಚ್ ಅಬ್ದುಲ್ ರಹ್ಮಾನ್ ಅವರ ಪುತ್ರಿ ಫಾತಿಮತ್ ಝುಲ್ಫ 389 ಅಂಕ ಗಳಿಸಿ ಡಿಸ್ಟಿಂಕ್ಷನ್ ನೊಂದಿಗೆ ರೆಂಜ್ ಮಟ್ಟದಲ್ಲಿ ದ್ವಿತೀಯ ಹಾಗು ಅಬ್ದುಲ್ ಖಾದರ್ ಅವರ ಪುತ್ರಿ ಅರ್ಫಾನ 382 ಅಂಕ ಗಳಿಸಿ ಡಿಸ್ಟಿಂಕ್ಷನ್ ನೊಂದಿಗೆ ರೆಂಜ್ ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿ ಮದರಸಕ್ಕೆ ಕೀರ್ತಿ ತಂದಿದ್ದಾರೆ.
ನೂರುಲ್ ಇಸ್ಲಾಂ ಸೆಕಂಡರಿ ಮದರಸ ಕಾವು ಇದರ ಸದರ್ ಉಸ್ತಾದ್ ಶುಕೂರ್ ದಾರಿಮಿ ಹಾಗೂ ಸಹಪಾಠಿಗಳು ಹಾಗು ಬದ್ರಿಯಾ ಗ್ರೂಪ್ ಕಾವು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.