ವಿಟ್ಲ(ವಿಶ್ವಕನ್ನಡಿಗ ನ್ಯೂಸ್): ಸಾಮಾಜಿಕ ಕಳಕಳಿಯ ಚೈತನ್ಯವನ್ನು ವೃದ್ದಿಗೊಳಿಸಲೆಂದೇ ಸಮಾಜದಲ್ಲಿ ನವಯುವ ಮನಸ್ಸುಗಳನ್ನು ಒಟ್ಟು ಸೇರಿಸಿ ಸಮಾಜದ ಒಳಿತಿಗಾಗಿ ನಮ್ಮದೂ ಒಂದು ಸಹಕಾರ ಇದೆ ಎಂಬ ದಿಟ್ಟ ನಿರ್ಧಾರದೊಂದಿಗೆ ಕಳೆದ ಕೆಲವಾರು ವರ್ಷಗಳಿಂದ ವಿಟ್ಲ ಪರಿಸರದಲ್ಲಿ ಬಹಳ ಅಭಿಮಾನ ಸಂಕೇತವಾಗಿ ಸ್ಥಾಪಿತಗೊಂಡಿರುವ ಡಿ’ ಗ್ರೂಪ್(ರಿ) ವಿಟ್ಲ ಇದರ ಇಂದಿನ ಸೇವಾ ಕಾರ್ಯ ನಿಜಕ್ಕೂ ಮೆಚ್ಚಲೇಬೇಕಿದೆ.
ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿದ್ದ ಒಳ ರೋಗಿಯನ್ನು ಲಾಕ್ ಡೌನ್ ಸಂದ್ರಿಕ್ತ ಪರಿಸ್ಥಿತಿಯ ಮಧ್ಯೆಯೂ ಡಿ’ ಗ್ರೂಪ್ (ರಿ) ವಿಟ್ಲ ಇದರ ಸದಸ್ಯರಾದ ಉಬೈದ್ ಹಾಗೂ ಶುಹೈಬ್ ಬರೋಬ್ಬರಿ 700 ಕಿ.ಮೀ ಆಚೆಗೂ ಕ್ರಮಿಸಿ ಡಿ’ ಗ್ರೂಪ್(ರಿ) ಆಂಬ್ಯುಲೆನ್ಸ್ ಮುೂಲಕ ರೋಗಿಯನ್ನು ಸುರಕ್ಷಿತವಾಗಿ ಹುಟ್ಟೂರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಡವರ ಸೇವೆಗಾಗಿ ಸದಾ ಒಂದು ಫೋನ್ ಕರೆಗೆ ಸ್ಪಂದಿಸುವ ಡಿ’ ಗ್ರೂಪ್(ರಿ) ಆಂಬ್ಯುಲೆನ್ಸ್ ಈ ಕೋವಿಡ್ ವೇಳೆಯಲ್ಲಿ ತನ್ನದೇ ಆದ ಅಚ್ಚುಕಟ್ಟಾದ ಕಾರ್ಯ ಕ್ಷಮತೆಯನ್ನು ಮೆರೆದಿದೆ.ಕೆಲವೊಂದು ಅಶಕ್ತ ರೋಗಿಗಳಿಗೆ ಔಚಿತ್ಯ ರೂಪದಲ್ಲಿ ನೆರವಾಗಿ ಮಾನವೀಯತೆಯನ್ನು ಕೂಡ ಪ್ರಸ್ತುತಪಡಿಸಿದೆ ಈ ಡಿ’ ಗ್ರೂಪ್(ರಿ) ವಿಟ್ಲ.
“ಚಾಲಕ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿಯಾಗಿ ಸಹಕರಿಸಿದ ಉಬೈದ್ ವಿಟ್ಲ ಹಾಗೂ ಶುಹೈಬ್ ವಿಟ್ಲ ಎಂಬೀರ್ವ ಸಹೋದರರಿಗೆ ನನ್ನದೊಂದು ಸಲಾಂ … ಹ್ಯಾಟ್ಸಾಫ್ ಡಿ’ ಗ್ರೂಪ್(ರಿ) ಆಂಬ್ಯುಲೆನ್ಸ್ ಟೀಂ ..
ಸಾಮಾಜಿಕ ಅಭ್ಯುದಯಕ್ಕಾಗಿ ಮಹೋನ್ನತ ಸಹಕಾರ ನೀಡುತ್ತಿರುವ ಡಿ’ ಗ್ರೂಪ್(ರಿ) ವಿಟ್ಲ ಅಶಕ್ತ-ಅಸಾಹಯಕರ ಪಾಲಿನ ಮಹಾನ್ ಚೇತನವಾಗಿ ಹೀಗೇ ಮುಂದುವರೆಯಲಿ ಎಂಬ ಹಾರೈಕೆಯೊಂದಿಗೆ..”
ಅಬ್ದುಲ್ ರಝಾಕ್ ಸಾಲ್ಮರ ಕಾರ್ಯ ನಿರ್ವಾಹಕರು ಬ್ಲಡ್ ಡೋನರ್ಸ್ ಮಂಗಳೂರು (ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.