(www.vknews.com) ; ಹೌದು ಮಹಾಮಾರಿ ಕೊರೊನಾ ರೋಗ ತಡೆಗೆ ಸಾಮಾಜಿಕ ಅಂತರ ಪಾಲನೆಗೆ ಬಹುಮುಖ್ಯ ಔಷಧಿಯಾಗಿದ್ದು , ಸದ್ಯ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಸಾಮಾಜಿಕ ಪಾಲನೆ ನಾವು ಇನ್ನೂ ಮುಂದೆ ಪಾಲಿಸಬೇಕಾದ ನಿಯಮವು ಹೌದು ಅಲ್ಲದೆ ಅದನ್ನೇ ನಾವು ಜೀವನದಲ್ಲಿ ಅಳವಡಿಸಿ ಕೊಂಡು ಕರೋನದ ನಡುವೆ ಜೀವಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಬಾರ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜನರು ಸರದಿ ಸಾಲಿನಲ್ಲಿ ನಿಂತು ಅಂತರ ಕಾಪಾಡಿಕೊಳ್ಳುವ ಮೂಲಕ ಮದ್ಯದ ಬಾಟಲ್ ಖರೀದಿಸುವುದು ಎಲ್ಲೆಡೆ ಕಂಡು ಬರುತ್ತಿದೆ ಆದ್ರೆ ಇಲ್ಲೊಂದು ಬಾರ್ ನಲ್ಲಿ ಸಾಮಾಜಿಕ ಅಂತರ ಪಾಲನೆಗೆ ಕಂಡುಕೊಂಡಿರೊ ಒಂದು ಸೂಪರ್ ಐಡಿಯಾ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಖುಷಿ ಬಿಯರ್ ಶಾಪ್ ಅನ್ನೋ ಅಂಗಡಿಯಲ್ಲಿ ಪೈಪ್ವೊಂದನ್ನ ಅಳವಡಿಸಿ, ಅದರ ಮೂಲಕವೇ ಗ್ರಾಹಕರಿಂದ ಹಣ ಪಡೆದು, ಬಿಯರ್ ಬಾಟಲಿಗಳನ್ನ ಕೊಡಲಾಗಿದೆ ಇದೊಂದು ಮಾದರಿಯ ಸಾಮಾಜಿಕ ಪಾಲನೆ ವಿಡಿಯೋ ವೈರಲ್ ಆಗುತ್ತಿದೆ.
ಬಾರ್ನ ಕೌಂಟರ್ಗೆ ಒಂದು ದೊಡ್ಡ ಪೈಪ್ ಅಳವಡಿಸಿ, ಮಧ್ಯದಲ್ಲಿ ಒಂದು ಪರದೆ ಅಲ್ಲದೆ ಗ್ರಾಹಕನಿಂದ ಹಣ ಪಡೆಯಲು ಬಾರ್ ಸಿಬ್ಬಂದಿ ಪೈಪ್ ಮೂಲಕ ಒಂದು ಪ್ಲಾಸ್ಟಿಕ್ ಬಾಟಲಿಯನ್ನ ತಳ್ಳುತ್ತಾರೆ. ಆತ ಹಣ ಇಟ್ಟ ಬಳಿಕ ಅದನ್ನ ವಾಪಸ್ ಎಳೆದುಕೊಂಡು ಮತ್ತೆ ಚಿಲ್ಲರೆ ಇಟ್ಟು ಕಳಿಸುತ್ತಾರೆ. ಇತ್ತ ಗ್ರಾಹಕ ಚಿಲ್ಲರೆ ತೆಗೆದುಕೊಂಡ ನಂತರ ಮತ್ತೆ ಪ್ಲಾಸ್ಟಿಕ್ ಬಾಟಲಿ ಮರಳಿ ಪಡೆದು, ಬಿಯರ್ ಬಾಟಲಿಗಳನ್ನ ಜಾರಿಬಿಡ್ತಾರೆ. ಇತ್ತ ಪೈಪ್ನ ತುದಿಯಲ್ಲಿ ನಿಂತ ಗ್ರಾಹಕ ಹುಷಾರಾಗಿ ಆ ಬಾಟಲಿಗಳನ್ನ ಪಡೆದು ಕೊಂಡೊಯ್ಯೋದನ್ನ ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ವೀಕ್ಷಿಸಿ…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.