(www.vknews.com) : ಖಂಡಿತವಾಗಿಯೂ ನಾವು ಮನಸು ಮಾಡಿದರೆ ಕೋವಿಡ್-19 ಎಂಬ ಮಹಾಮಾರಿಯ ರುದ್ರತಾಂಡವನ್ನು ಸಂಪೂರ್ಣ ನಿರ್ನಾಮ ಮಾಡಬಹುದು. ಇಂದು ಜಗತ್ತಿನಾದ್ಯಂತ ಅತೀ ಶೀಘ್ರವಾಗಿ ಹರಡುತ್ತಿರುವ ಈ ಮಹಾಮಾರಿ ಕರೋನಾವನ್ನು ನಾವು ಎದುರಿಸಲೇಬೇಕಾದ ಅತೀ ಅಗತ್ಯತೆ ನಮ್ಮ ಮುಂದೆ ಇದೆ.
ಆದರೆ ನಮ್ಮ ಭಾರತ ಸರ್ಕಾರ ಇದರ ವಿರುದ್ಧ ದಿಟ್ಟ ಹೆಜ್ಜೆ ಇಟ್ಟು ಯೋಜನೆಗಳನ್ನು ಮುಂದಿಡಲು ಅಥವಾ ಕರೋನಾ ರೋಗಿಗಳ ಉಚಿತ ಚಿಕಿತ್ಸಾ ವೆಚ್ಚ ಭರಿಸಲು ಸಂಪೂರ್ಣವಾಗಿ ಸೋತು ಹೋಗಿದೆ. ಹಾಗೂ ಭಾರತದ ಆರ್ಥಿಕತೆಯಲ್ಲಿ ಭಾರೀ ಕುಸಿತ ಉಂಟಾದ ಹಿನ್ನಲೆಯಲ್ಲಿ ನಮಗೆ ನಾವೇ ಸ್ವರಕ್ಷಣೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದ್ದು ಕಾಣುತ್ತಿವೆ.
ಪ್ರಾರಂಭದ ಲಾಕ್ಡೌನ್ ದಿನಗಳಲ್ಲಿ ಹಲವಾರು ಸಂಘಸಂಸ್ಥೆಗಳು, ದಾನಿಗಳು, ಸಮಾಜ ಸೇವಕರು ಮುಂದೆ ಬಂದಿದ್ದಾರೆ. ಹಾಗೂ ರಂಝಾನ್ ದಿನಗಳಲ್ಲಿಯೂ ಇವರ ಸೇವೆ ನಿರಂತರವಾಗಿ ನಡೆಯುತ್ತಾ ಜಾತಿ, ಮತ, ಬೇಧವಿಲ್ಲದೆ ಸಾವಿರಾರು ಕುಟುಂಬಗಳಿಗೆ ಬೆಳಕಾಗಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಕರೋನಾ ವೈರಸ್ಗಳ ಕಾಟ ನಿಲ್ಲುವವರೆಗೂ ಸಂಪೂರ್ಣ ಲಾಕ್ಡೌನ್ ಮಾಡುವ ಯಾವುದೇ ಪ್ರಯತ್ನ ಮಾಡದೆ ಕೈಚೆಲ್ಲಿ ಕುಳಿತಿದೆ. ಇದರ ಪರಿಣಾಮ ಬಹಳವಾಗಿ ಸಾಮಾನ್ಯ ಪ್ರಜೆಗಳ ಮೇಲೆ ಬೀಳುವುದರಿಂದ ನಾವು ಇದರ ಬಗ್ಗೆ ಗಂಭಿರವಾಗಿ ಚರ್ಚೆ ನಡೆಸಬೇಕು.
ಇದಕ್ಕಾಗಿ ನಾವೇನು ಮಾಡಬಹುದು?
ಸಂಘಸಂಸ್ಥೆಗಳು ಮುಂದೇನು ಮಾಡಬೇಕು? ದಾನಿಗಳ ಮುಂದಿನ ದಾನ ಯಾವುದಾಗಿರಬೇಕು?
ಹೌದು, ದಾನಿಗಳಾದ ನಾವು ಜಾತಿ,ಭೇದ ಮರೆತು ಎಲ್ಲಾ ಸಂಘಸಂಸ್ಥೆಗಳು ಒಂದಾಗಿ ಕೋವಿಡ್-19 ಪರೀಕ್ಷೆಯ ಒಂದು ಶಿಬಿರಗಳನ್ನು ಪ್ರತಿಯೊಂದು ಜಮಾಅತ್ನಲ್ಲಿ, ಆಯಾ ಊರಿನಲ್ಲಿ, ಹಾಗೂ ತಮ್ಮ ಮೊಹಲ್ಲಾಗಳಲ್ಲಿ ಬಡವರಿಗೆ ಹಾಗೂ ಮದ್ಯಮ ವರ್ಗದ ಜನಸಾಮಾನ್ಯರಿಗೆ ಉಚಿತವಾಗಿ ಕರೋನಾ ಟೆಸ್ಟ್ ಮಾಡಿಸುವ ಮುಖಾಂತರ ಇಡೀ ದೇಶವೇ ನಮ್ಮ ದ.ಕ.ಜಿಲ್ಲೆಗೆ ಮಾದರಿಯಾಗಬೇಕು.
ಇಂತಹ ಅನೇಕ ಶಿಬಿರಗಳನ್ನು ರಚಿಸಿ ಜ್ವರ ಬಂದಂತಹ ರೋಗಿಗಳ ಪರೀಕ್ಷೆ ಮಾಡಿಸಿ ಅವರಿಗೆ ಕರೋನಾ ರೋಗ ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ಸಾಗಿಸುವ, ಅಥವಾ ಕಾರೆಂಟೈನ್ಗೆ ಕಳುಹಿಸುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ನಮ್ಮ ಭಾರತ ದೇಶವೇ ಮುಂದಿನ ದಿನಗಳಲ್ಲಿ ಅತೀ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಬಹುದು.
ಅದೇ ರೀತಿ ನಮಗೆ ನಾವೇ ಸ್ವಯಂ ಪ್ರೇರಿತವಾಗಿ ಕೆಲವು ದಿನಗಳ ಮಟ್ಟಿಗಾದರೂ ಲಾಕ್ಡೌನ್ ಮಾಡಬೇಕು. ಒಂದು ಊರಿನ ಜನರು ಇನ್ನೊಂದು ಊರಿಗೆ ತುರ್ತುಪರಿಸ್ಥಿತಿಯ ವಿನಃ ಯಾರೂ ಓಡಾಡಬಾರದು. ಅಗತ್ಯವಾದ ಆಹಾರ ಸಾಮಾಗ್ರಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ತಮ್ಮ ಊರಿನ ಮುಖಾಂತರವೇ ಪಡೆಯಲು ಪ್ರಯತ್ನಿಸಿರಿ. ಇದರಿಂದ ಕರೋನಾ ಹರಡುವಿಕೆಯನ್ನು ತಡೆಗಟ್ಟಬಹುದು. ಕೇವಲ ಸರಕಾರವನ್ನು ದೂಷಿಸುತ್ತಾ ಇದ್ದರೆ ಯಾವುದೇ ಪ್ರಯೋಜನ ಇರುವುದಿಲ್ಲ. ನಮ್ಮಸುರಕ್ಷತೆಗೆ ಸರಕಾರದ ನಿಯಮಗಳನ್ನು ಕಾಯದೆ ನಾವೇ ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಬೇಕು. ಹಾಗೂ ಶಿಬಿರಗಳನ್ನು ತೆರೆಯುವಲ್ಲಿ ಒಂದು ಉತ್ತಮ ಹೆಜ್ಜೆಯನ್ನು ಇಟ್ಟು ಮುನ್ನಡೆಯೋಣ.
ದ.ಕ. ಜಿಲ್ಲೆಯಲ್ಲಿ ಸಂಘಸಂಸ್ಥೆಗಳು ಈ ಒಂದು ಕಾರ್ಯವನ್ನು ತಕ್ಷಣವೇ ಜಾರಿಗೆ ತರಬೇಕು. ಇದರಿಂದ ಭಾರತ ದೇಶಕ್ಕೆ ಒಂದು ಉತ್ತಮ ಸಂದೇಶ ರವಾನೆ ಆಗುತ್ತದೆ. ಹಾಗೂ ಪ್ರತಿಯೊಬ್ಬರೂ ಸುರಕ್ಷಿತರಾಗಿ ಇರಬಹುದು.
ದಾನಿಗಳೇ ತಾವೂ ಮುಂದೆ ಬನ್ನಿ, ತಮ್ಮವರನ್ನೂ ಈ ಒಂದು ಕಾರ್ಯಕ್ಕೆ ಕೈಜೋಡಿಸಲು ಮನವರಿಕೆ ಮಾಡಿ. ಸ್ವರ್ಗಸೃಷ್ಠಿಕರ್ತನು ನಮಗೆ ಸ್ವರ್ಗದ ಹಾದಿ ತೋರಿಸದೆ ಇರಲಾರನು. ಕಾರಣ ಆತನು ಕರುಣೆ ಉಳ್ಳವನಾಗಿದ್ದಾನೆ ಎಂಬ ಮಾತು ಮರೆಯದಿರಿ ಎಂಬ ಮಾತನ್ನು ಮಗದೊಮ್ಮೆ ನೆನಪಿಸುತ್ತಾ, ಬನ್ನಿ ನಮ್ಮೊಂದಿಗೆ ಕೈಜೋಡಿಸಿ…
– ಇಲ್ಯಾಸ್ ಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.