ಕಳೆದ ಮೂರು ತಿಂಗಳ ಹಿಂದೆ ವಿದೇಶದಿಂದ(ಹಾಂಕ್’ಕಾಂಗ್) ಆಗಮಿಸಿದ ಯುವಕ, ಲಾಕ್ ಡೌನ್ ನಿಂದಾಗಿ ಮತ್ತೆ ವಿದೇಶಕ್ಕೆ ತೆರಳಲಾಗದೆ ಮನೆಯಲ್ಲಿಯೇ ಇದ್ದ ಎನ್ನಲಾಗಿದೆ. ಇತ್ತೀಚೆಗೆ ವಿದೇಶಿ ವಿಮಾನಗಳು ಸಂಚಾರ ಪ್ರಾಂಭಿಸಿದರಿಂದ ಮತ್ತೆ ವಿದೇಶಕ್ಕೆ ತೆರಳುವ ಉದ್ದೇಶದಿಂದ ವಿದೇಶ ಪ್ರವಾಸದ ನಿಯಮನುಸಾರ ಕಡ್ಡಾಯ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಯುವಕನಲ್ಲಿ ಕೊರೋನ ಪಾಸಿಟಿವ್ ಇರೋದು ಕಂಡುಬಂದಿದೆ.
ಸ್ಥಳೀಯ ಆಡಳಿತ, ಮುಲ್ಕಿ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಹಳೆಯಂಗಡಿ ಸಮೀಪ ಸಾಗ್ ಬಳಿ ಇರುವ ಆತನ ಮನೆಗೆ ತೆರಳಿ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಂಗಳೂರಿನ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿದೆ ಹಾಗು ಆತನ ಮನೆಯಲ್ಲಿದ್ದ ಇತರ ಏಳು ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ವರದಿ:ಅದ್ದಿ ಬೊಳ್ಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.