ಸೌದಿ ಅರೇಬಿಯಾ(ವಿಶ್ವಕನ್ನಡಿಗ ನ್ಯೂಸ್): ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಬೈಶ್ (ಜಿಝಾನ್) ನಲ್ಲಿ ನಡೆದ T10 ಬ್ಯಾರಿ ಪ್ರೀಮಿಯರ್ ಲೀಗ್ -2020 ಕೂಟದಲ್ಲಿ ಸ್ವತಹ ಆಯೋಜಕ ತಂಡವಾದ ಟೀಂ ಬಿನ್ ಫಹಾದ್ ಎದುರಾಳಿ ಯುನೈಟೆಡ್ ಟೆಕ್ ತಂಡವನ್ನು ಫೈನಲ್ ನಲ್ಲಿ 34 ರನ್ ಅಂತರಲ್ಲಿ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಳೆದ ಒಂದು ವಾರದಿಂದ ನಡೆದ ಈ ಯಶಸ್ವೀ ಪಂದ್ಯಾಕೂಟದಲ್ಲಿ ಮಂಗಳೂರು ಪರಿಸರದ 6 ಪ್ರಮುಖ ತಂಡಗಳು ಟ್ರೋಫಿಗಾಗ್ ಸೆಣಸಾಡಿದ್ದವು.
ಪಂದ್ಯಾಕೂಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಟೀಂ ಬಿನ್ ಫಹಾದ್ ತಂಡದ ಅವುಫಾಝ್ ಕೃಷ್ಣಾಪುರ, ಕೂಟದ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಯುನೈಟೆಡ್ ಟೆಕ್ ತಂಡದ ಸಲಾಂ ಮಂಜೇಶ್ವರ, ಸರಣಿಯ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಟೀಂ ಬಿನ್ ಗಫಹಾದ್ ತಂಡದ ನೌಶಾದ್ ಕಲಂದರ್ ಕರ್ನಿರೆ, ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ನೂರ್ ಬಜಾಲ್ ಹಾಗೂ ಉತ್ತಮ ಕ್ಷೇತ್ರರಕ್ಷಣೆ ಪ್ರಶಸ್ತಿ ಟೀಂ ಬಿನ್ ಫಹಾದ್ ತಂಡದ ಅಝೀದ್ ಮೂಡಬಿದ್ರೆ ತನ್ನದಾಗಿಸಿಕೊಂಡರು.ಸೌದಿ ಅರೇಬಿಯಾದಲ್ಲಿ ಅನಿವಾಸಿಗಳ ದೈನಂದಿನ ಒತ್ತಡದ ಬದುಕಿನ ನಡುವೆ ಇಂಥಹಾ ಮನೊರಂಜನಾತ್ಮಕ ಕ್ರಿಕೆಟ್ ಪಂದ್ಯಾಟವು ಹಲವು ಜನರ ಮನಸೂರೆಗೊಂಡು ಅಪಾರ ವೀಕ್ಷಕರನ್ನು ತನ್ನೆಡೆಗೆ ಸೆಳೆದಿತ್ತು.
ಸರಣಿಯ ಮುಕ್ತಾಯದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಹಾಶಿಂ ಮಂಗಳೂರು ರೆಸ್ಟೊರೆಂಟ್, ಸಿರಾಜ್ ಎನ್. ಎನ್.ಸಿ. ಭಟ್ಕಳ,ಸಲೀಂ ಉಪ್ಪಿನಂಗಡಿ, ನವಾಝ್ ಶಾಕೋ ಕನ್ನಂಗಾರ್ ಹಾಗೂ ಝಿಯಾದ್ ಕೃಷ್ಣಾಪುರ ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಪ್ರಮುಖ ತೀರ್ಪುಗಾರರಾಗಿ ಸಿರಾಜ್ ಮುಕ್ಕ, ಅಶ್ಪಾಕ್ ಜೋಕಟ್ಟೆ ಮತ್ತು ಸ್ಕೋರರ್ ಆಗಿ ರಿಲ್ವಾನ್ ಬಜ್ಪೆ ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.