ಬಂಟ್ವಾಳ(ವಿಶ್ವಕನ್ನಡಿಗನ್ಯೂಸ್): ಫರಂಗಿಪೇಟೆಯಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ “ಲೈಫ್ ಕೇರ್” ಹೆಲ್ತ್ ಸೆಂಟರ್ ನ ಉದ್ಘಾಟನಾ ಸಮಾರಂಭ ನ.30 ರ ಸೋಮವಾರ ಬೆಳಿಗ್ಗೆ 9.30 ಕ್ಕೆ ನಡೆಯಲಿದೆ.
ಹಾಜಿ ಮೊಹಮ್ಮದ್ ಹನೀಫ್ ಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಯಾಗ್ನೋಸ್ಟಿಕ್ ಲ್ಯಾಬ್ ಉದ್ಘಾಟನೆಯನ್ನು ಮಾಜಿ ಸಚಿವ, ಶಾಸಕ ಯು ಟಿ ಖಾದರ್ ನೆರವೇರಿಸಲಿದ್ದಾರೆ. ಪಾಲಿಕ್ಲಿನಿಕ್ ಉದ್ಘಾಟನೆಯನ್ನು ಆಯಿಷಾ ಅಬ್ದುಲ್ಲಾ ಅವರು ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಬ್ಬಾಸ್ ದಾರಿಮಿ ಪರಂಗಿಪೇಟೆ, ಕೆ.ಕೃಷ್ಣಕುಮಾರ್ ಪೂಂಜ ಮತ್ತು ಫಾದರ್ ಜೆರಾಲ್ಡ್ ರೋಬೋ ಶುಭ ಹಾರೈಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರವೀಂದ್ರ ಕಂಬಳಿ, ಎಸೈ ಪ್ರಸನ್ನ ಎಂ ಎಸ್, ರಮ್ಲಾನ್ ಮಾರಿಪಳ್ಳ, ಉಮ್ಮರ್ ಫಾರೂಕ್ ಮತ್ತು ರಿಯಾಝ್ ಫರಂಗಿಪೇಟೆ ಭಾಗವಹಿಸಲಿದ್ದಾರೆ.
ಸೇವೆಗಳು: ಇಲ್ಲಿ ಕಂಪ್ಯೂಟರೀಕೃತ ಲ್ಯಾಬ್, ಡೇ ಕೇರ್, ಇಸಿಜಿ, ನೆಬ್ಯುಲೈಝೇಶನ್, ಹೋಂ ಕಲೆಕ್ಷನ್ ಸರ್ವೀಸ್ , ಹೊಲಿಗೆ ರಹಿತ ಮುಂಜಿ ಕರ್ಮ, ವಿವಿಧ ರೋಗಳಿಗೆ ಸಂಬಂಧಿಸಿದ ಪ್ರಸಿದ್ಧ ವೈದ್ಯರ ಸಂದರ್ಶನ ಮೊದಲಾದ ಸೇವೆಗಳು ಲಭ್ಯವಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಇಲ್ಲಿ ವೈದ್ಯಕೀಯ ತಜ್ಞರು, ಮಹಿಳಾ ತಜ್ಞರು, ಮಕ್ಕಳ ತಜ್ಞರು, ಚರ್ಮ ರೋಗ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಎಲುಬು ಮತ್ತು ಮೂಗು ರೋಗ ತಜ್ಞರು ಇಲ್ಲಿ ಸೇವೆ ನೀಡಲು ಲಭ್ಯವಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.