ಮೆಲ್ಕಾರ್(ವಿಶ್ವಕನ್ನಡಿಗ ನ್ಯೂಸ್): ಬದ್ರಿಯಾ ಜುಮಾ ಮಸ್ಜಿದ್ ರೆಂಗೇಲ್, ಮೆಲ್ಕಾರ್’ನಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವಂತ ಮಾಸಿಕ ಸ್ವಲಾತ್ ಮಜ್ಲಿಸ್ ಇದರ 17ನೇ ವಾರ್ಷಿಕದ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ .
ಮಾರ್ಚ್ 13, ಶನಿವಾರ ಮಗ್ರಿಬ್ ನಮಾಝ್ ಬಳಿಕ ಬಿ.ಎಚ್ ಅಬೂಸ್ವಾಲಿಹ್ ಉಸ್ತಾದ್’ರವರ ನೇತ್ರತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಮಸೀದಿಯಲ್ಲಿ ನಡೆಯಲಿದ್ದು, ಸ್ಥಳೀಯ ಖತೀಬರಾದ ಹೈದರ್ ಅಲಿ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾರ್ಚ್ 14 ಭಾನುವಾರ ಮಗ್ರಿಬ್ ನಮಾಝ್ ತಕ್ಷಣ ಮರ್ಹೂಂ ತಾಜುಲ್ ಉಲೆಮಾ ಸ್ವದಖತುಲ್ಲಾಹ್ ಉಸ್ತಾದ್ ವೇದಿಕೆಯಲ್ಲಿ ಇಶ್ಖೇ ಮದೀನಾ ಬುರ್ದಾ ತಂಡದಿಂದ ಬುರ್ದಾ ಮಜ್ಲಿಸ್ ನಡೆಯಲಿದೆ, ಇಸ್ಮಾಯಿಲ್ ಝುಹ್ರಿ ಗಡಿಯಾರ ನೇತ್ರತ್ವ ನೀಡಲಿದ್ದಾರೆ, ಬದ್ರಿಯಾ ಮದ್ರಸ ಮುಅಲ್ಲಿಂ ಬಶೀರ್ ಮುಸ್ಲಿಯಾರ್ ಉದ್ಘಾಟನೆ ಮಾಡಲಿದ್ದಾರೆ.
ಅದೇ ದಿನ ರಾತ್ರಿ 8:30 ಕ್ಕೆ ಬಿ.ಎಚ್ ಅಬೂಸ್ವಾಲಿಹ್ ಉಸ್ತಾದ್(ಮುದರ್ರಿಸಿ ಆಲಡ್ಕ) ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮದಲ್ಲಿ ಪ್ರಖ್ಯಾತ ವಾಗ್ಮಿ ನೌಫಳ್ ಸಖಾಫಿ ಕಳಸ ಬ್ಯಾರಿ ಭಾಷೆಯಲ್ಲಿ ಮುಖ್ಯ ಪ್ರಭಾಷಣ ಮಡಲಿದ್ದಾರೆ.
ಸ್ಥಳೀಯ ಖತೀಬರಾದ ಹೈದರ್ ಅಲಿ ಸಖಾಫಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.ವೇದಿಕೆಯಲ್ಲಿ BJM ರೆಂಗೇಲ್ ಅಧ್ಯಕ್ಷರಾದ ಅಬ್ದುಲ್ ಕರೀಮ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ರೆಂಗೇಲ್, ಮಾಜಿ ಅಧ್ಯಕ್ಷ ಪಿ.ಆರ್ ಇದ್ದಿನಬ್ಬ ಹಾಗೂ ಬದ್ರಿಯಾ ಯೂತ್’ವಿಂಗ್ ಗೌರವಾಧ್ಯಕ್ಷರಾದ ಪಿ.ಆರ್ ಯೂಸುಫ್ ಇಲ್ಯಾಸ್ ಉಪಸ್ಥಿತಲಿರಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.