ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರಪಾಲಿಕೆ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಜಂಟಿ ಆಶ್ರಯದಲ್ಲಿ ಸೋಮವಾರ ಮ೦ಗಳೂರಿನ ಮಂಗಳಾ ಕ್ರೀಡಾಂಗಣ ದಲ್ಲಿ ನಡೆಸಿದ (15/3/2021) ಮಹಿಳಾ ಕ್ರೀಡಾಕೂಟ-2021 ರಲ್ಲಿ ತ್ರೋಬಾಲ್ ಪಂದ್ಯಾಟದಲ್ಲಿ ಮಕ್ಕಿಮನೆ ಮಂಗಳೂರು ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಮೋನಿಷಾ , ಪ್ರಜ್ವಿತ, ಪೂಜಾ ಡಿ, ವಿಜೇತಾ, ಅನನ್ಯ, ಹರ್ಷಿತಾ ಆರ್, ಸಂಜನಾ, ತಪಸ್ವಿ, ರಕ್ಷಿತಾ, ಲೀಶಲ್, ನಿರೀಕ್ಷಾ, ವಿಜಯಲಕ್ಷ್ಮಿ ಪೈ, ಶಿಲ್ಪ ರಾವ್ ಭಾಗವಹಿಸಿದ್ದರು. ತಂಡದ ಮುಖ್ಯಸ್ಥರಾದ ಸುದೇಶ್ ಜೈನ್ ಮಕ್ಕಿಮನೆ ಉಪಸ್ಥಿತರಿದ್ದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭ ದಲ್ಲಿ ದ. ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ, ಹಾಗೂ ಶ್ರೀಮತಿ ಧನಲಕ್ಷಿ ಗಟ್ಟಿ, ಸಂಧ್ಯಾ ಎಂ. ಆಚಾರ್, ಶ್ರೀ ಪ್ರದೀಪ್ ಡಿ’ಸೋಜ, ವಿನೋದ್ ಕುಮಾರ್ ಸಸಿಹಿತ್ಲು ಸಹಿತ ಅನೇಕ ಗಣ್ಯ ಮಹನೀಯರು ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.