*ವಾಟ್ಸಾಪ್ ಸ್ಟೇಟಸ್ ತಂತು ಜೀವಕ್ಕೆ ಕುತ್ತು
*ಕಾರು ಹಾಯಿಸಿ ಸಾಯಿಸಿದ :ಕುಟುಂಬದವರ ಆರೋಪ
*ಸಾಮಾಜಿಕ ಜಾಲ ತಾಣದಲ್ಲಿ ಅಕ್ರಮ–ಅನ್ಯಾಯವನ್ನು ನಿರಂತರ ಬಯಲು ಮಾಡುತ್ತಿದ್ದವನನ್ನು ಕೊನೆಗೂ ಬಾಯಿ ಮುಚ್ಚಿಸಿಬಿಟ್ಟ ಅಧ್ಯಕ್ಷ
ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ): ತಾಲೂಕಿನ ಯಡಮೊಗ್ಗೆ ಗ್ರಾಮ ಪಂಚಾಯ್ತ್ ವ್ಯಾಪ್ತಿಗೆ ಸಂಬಂಧ ಪಟ್ಟ ಹೊಸಬಾಳು ಎಂಬಲ್ಲಿ ಶನಿವಾರ ರಾತ್ರಿ ಸ್ಥಳೀಯ ನಿವಾಸಿ ಉದಯ ಗಾಣಿಗ ಎಂಬುವವರ ಮೇಲೆ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ತನ್ನ ಕಾರು ಹಾಯಿಸಿ ಸಾಯಿಸಿದ್ದಾನೆ ಎಂದು ಆರೋಪ ಕೇಳಿಬಂದಿದ್ದು ,ಆರೋಪಿ ಪ್ರಾಣೇಶ್ ಯಡಿಯಾಳ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿ ಆದ ಘಟನೆ ನಡೆದಿದೆ. ಕಾರು ಹರಿದು ತೀವ್ರ ಅಸ್ವಸ್ಥಗೊಂಡ ಉದಯ ಗಾಣಿಗ ನನ್ನು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರುಳೆದಿದ್ದು ಸ್ಥಳೀಯರಲ್ಲಿ ಆಕ್ರೋಶದ ಕಟ್ಟೆ ಒಡೆದಿದೆ ,ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ .
ನಡೆದಿದ್ದು ಏನು :ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮನೆಯ ಎದುರಿನ ರಸ್ತೆಯ ಮೇಲೆ ನಿಂತಿದ್ದ ಉದಯ್ ಗಾಣಿಗರ ಮೇಲೆ ಪ್ರಾಣೇಶ್ ಯಡಿಯಾಳ ಏಕಾಏಕಿಯಾಗಿ ಕಾರು ಚಲಾಯಿಸಿದ್ದಾನೆ. ಕಾರು ಉದಯ್ ಗಾಣಿಗ ಅವರ ಮೈಮೇಲೆ ಹತ್ತಿ ಹೋಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.ಅವರನ್ನು ಸ್ಥಳೀಯ ರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯುವ ಯತ್ನ ನಡೆಸಿದರಾದರೂ ದಾರಿ ಮಧ್ಯೆಯೇ ಉದಯ್ ಕೊನೆಯುಸಿರೆಳೆದಿದ್ದಾರೆ.ಮೃತರು , ಪತ್ನಿ, ಎರಡು ಮಕ್ಕಳು, ಕುಟುಂಬಿಕರು ಹಾಗೂ ಅಪಾರ ಸ್ನೇಹಬಳಗವನ್ನು ಅಗಲಿದ್ದಾರೆ.
ಮೃತ ಉದಯ ಗಾಣಿಗ
ಗ್ರಾ.ಪಂ ಅಧ್ಯಕ್ಷರ ಅನ್ಯಾಯ, ಅಕ್ರಮಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿನಿರಂತರ ಬರಹ ಪ್ರಕಟಿಸಿ ಪ್ರಶ್ನಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು , ದಿನದ ಹಿಂದಷ್ಟೇ “ಊರಿಗೆ ರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಮೊದಲು ಯಡಮೊಗೆಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸಿಗುವ ಹಾಗೆ ಮಾಡಿ. ಆಸ್ಪತ್ರೆಗೆ ಬೆಡ್ ವ್ಯವಸ್ಥೆ ಮಾಡಿ, ಪಾಸಿಟಿವ್ ಬಂದವನ್ನು ಆಸ್ಪತ್ರೆಗೆ ಸೇರಿಸಿ ಗುಣಮುಖರಾದವರನ್ನು ಮನೆಗೆ ಕಳುಹಿಸಿಕೊಡಿ. ಬಡ ಕೂಲಿ ಕಾರ್ಮಿಕರು ಊಟಕ್ಕೆ ಏನು ಮಾಡುತ್ತಿದ್ದಾರೆ ಅವರ ಸಮಸ್ಯೆಗಳನ್ನು ವಿಚಾರಿಸಿ. ಇದನ್ನು ಬಿಟ್ಟು ಊರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳಬೇಡಿ. ಇದರಿಂದ ಸರ್ಕಾರದ ಹಣ ನುಂಗಿ ನೀರು ಕುಡಿಯುವುದು ಬಿಟ್ಟು ಬೇರೇನು ಪ್ರಯೋಜನವಿಲ್ಲ“ಎಂದು ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ ಇದರಿಂದ ತೀರಾ ಕುಪಿತ ಗೊಂಡ ಪ್ರಾಣೇಶ್ ಯಡಿಯಾಳ ಕೊಲೆ ಮಾಡಲು ಮುಂದಾದರೆ ಎಂಬ ಪ್ರಶ್ನೆ ಸ್ಥಳೀಯ ವಲಯದ್ದು .
ಆರೋಪಿ ಪ್ರಾಣೇಶ್ ಯಡಿಯಾಳ್
ಯಾರೀ ಪ್ರಾಣೇಶ್ ಯಡಿಯಾಳ ? : ಆ ಭಾಗದಲ್ಲಿಅಷ್ಟೊಂದು ಉತ್ತಮ ಹೆಸರು ಹೊಂದಿರದ ಪ್ರಾಣೇಶ್ ಯಡಿಯಾಳ ಬಿಜೆಪಿ ಬೆಂಬಲಿತನಾಗಿ ಇತ್ತೀಚಿಗೆ ಎಡಮೊಗ್ಗೆ ಪಂಚಾಯತ್ ಅಧ್ಯಕ್ಷ ಪೀಠವನ್ನು ಏರಿದ್ದೂ , ಸಮಾಜಮುಖಿ ಕಾರ್ಯದಲ್ಲಿ ಹಿಂದಿದ್ದೂ, ಸ್ವಾರ್ಥ ಸಾಧನೆಯ ದಿಕ್ಕನ್ನು ಮಾತ್ರ ದಕ್ಕಿಸಿಕೊಳ್ಳುತ್ತಿದ್ದರಿಂದ ಸ್ಥಳಿಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ .
ವಾಟ್ಸಪ್ ಸ್ಟೇಟಸ್
ಈತನ ವಿರುದ್ಧ ಮಾತಾಡುವವರ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಿದ್ದ ಎಂದು ಹೇಳಲಾಗುತ್ತಿದೆ .ಈತನ ಅನ್ಯಾಯವನ್ನು ನಿರಂತರವಾಗಿ ಸಾಮಾಜಿಕ ತಾಣದಲ್ಲಿ ಪ್ರಕಟಿಸುತ್ತಿದದ್ದೇ ಉದಯನ ಪ್ರಾಣಕ್ಕೆ ಮುಳುವಾಯಿತು ಎಂಬುದು ಕುಟುಂಬದವರ ಅಂಬೋಣ . ಶಂಕರನಾರಾಯಣ ಪೊಲೀಸರರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.