ದುಬೈ(www.vknews.in): ಕೊವಿಡ್ ಲಸಿಕೆಗಳ ಪೈಕಿ ಆಕ್ಸ್’ಫರ್ಡ್ ಆಸ್ಟ್ರಾಝೆನಕಾ ಹಾಗೂ ಫೈಝರ್ ಎಂಬ ವ್ಯಾಕ್ಸಿನ್ನಿನ ಎರಡೂ ಡೋಸ್ ಸ್ವೀಕರಸಿದವರಿಗೆ ಅಲ್ಫಾ, ಬೇಟಾ ಹಾಗೂ ಡೆಲ್ಟಾ ಕೊವಿಡ್ ರೂಪಾಂತರಗಳು ಹೆಚ್ಚಿನ ಪ್ರಭಾವ ಬೀರದು ಎಂದು ಯುಎಇ ವೈದ್ಯಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ವಿವರಗಳನ್ನು ನೀಡಿದ ದುಬೈ ಅಲ್ ನಹ್ದಾದ ಎನ್ಎಮ್ಸಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಪ್ರಶಾಂತ್ ನಾಶಾ ಅವರು ‘ಯುಎಇ ಸರಕಾರವು ನೀಡುತ್ತಿರುವ ಆಸ್ಟ್ರಾಝೆನಕಾ ಹಾಗೂ ಫೈಝರ್ ಲಸಿಕೆಗಳು ಆಲ್ಫಾ,ಬೇಟಾ ಹಾಗೂ ಡೆಲ್ಟಾ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಈ ಲಸಿಕೆಗಳ ಎರಡು ಡೋಸ್ ಗಳನ್ನು ಪಡೆದವರ ಮೇಲೆ ಮೂರನೇ ಅಲೆ ಪ್ರಭಾವ ಬೀರುವ ಸಾಧ್ಯತೆಯಿಲ್ಲ ಎಂಬುವುದು ಸಂಶೋಧನೆಗಳಿಂದ ತಿಳಿದು ಬಂದಿದೆ’ ಎಂದು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.