ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಫ್ರೌಡ ಶಾಲಾ ವಿಭಾಗದ) ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಕುಮಾರಿ ವರ್ಷಿಣಿ.ವಿ. ರವರು ತಾಲ್ಲೂಕಿಗೆ ಅಧಿಕ ಅಂಕ ಪಡೆದ ಕಾರಣಕ್ಕಾಗಿ ಮಾಲೂರಿನ ಸಮಾಜ ಸೇವಕರು, ಜೆ.ಡಿ.ಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ರವರು ಲಕ್ಕೂರಿನ ಫ್ರೌಡ ಶಾಲೆಯ “ಸನ್ಮಾನ ಸಮಾರಂಭ” ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿನಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿನಿ ವರ್ಷಿಣಿ.ವಿ ರವರಿಗೆ ಅಭಿನಂದನೆ ಅರ್ಪಿಸಿದ ಮಾಲೂರಿನ ಸಮಾಜ ಸೇವಕ, ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ರವರು ಮಾತನಾಡಿ “ನಮ್ಮ ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶದಿಂದ ಬೆಳೆದು ಬಂದ ಪುರ ಗ್ರಾಮದ ಹೆಣ್ಣು ಮಗಳಾದ ವರ್ಷೀಣಿ.ವಿ ಇಂದು ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಇಡೀ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದಿರುವುದ ಸಂತೋಷದ ವಿಚಾರ. ಇಂದು ಈ ಮಗುವಿನ ಸಾಧನೆಯನ್ನು ಪರಿಗಣಿಸಿ ಅಭಿನಂದನೆ ಅರ್ಪಿಸುವ ಕಾರ್ಯ ಮಾಡುತ್ತಿರುವುದು ನನಗೆ ಬಹಳ ಸಂತೋಷ. ಶೈಕ್ಷಣಿಕ ಕ್ಷೇತ್ರದಲ್ಲಿ ಈ ಮಗು ಉನ್ನತವಾದ ಸಾಧನೆ ಮಾಡಿ, ತಾಲ್ಲೂಕಿನ ಕೀರ್ತೀ ಪತಾಕೆಯನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡಲಿ, ಈ ಮಗುವಿಗೆ ಶೈಕ್ಷಣಿಕವಾಗಿ ಅಗತ್ಯವಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು” ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು (ಫ್ರೌಡ ಶಾಲಾ ವಿಭಾಗದ) ಉಪ ಪ್ರಾಂಶುಪಾಲರಾದ ಅಲೀಂಉನ್ನಿಸಾ ರವರು ಮಾತನಾಡಿ “ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಪರಿಶ್ರಮ ಉತ್ತಮ ಭೋದನೆಯ ಮೂಲಕ ವಿದ್ಯಾರ್ಥಿ ಇಂದು ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಅಂಕ ಪಡೆದು ನಮ್ಮ ಶಾಲೆಯ ಕೀರ್ತೀ ಪತಾಕೆಯನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡಿರುವುದು ನಮಗೆ ಅತೀವ ಸಂತಸ ತಂದಿದೆ” ಎಂದರು.
ಇದೇ ಸಂದರ್ಭದಲ್ಲಿ ಮಾಲೂರಿನ ಎಸ್.ಎಫ್.ಎಸ್ ಶಾಲೆಯ ಪೂರ್ವೀಕ, ಬಿ.ಜಿ.ಎಸ್ ಶಾಲೆಯ ಬಾಲರಾಜು, ಹಾಗೂ ಗಾನವಿ ಟಿ ರವರ ಶಾಲೆಗಳಿಗೆ ತೆರಳಿ ಅಭಿನಂದನೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರಾಮಸ್ವಾಮಿ ರೆಡ್ಡಿ, ವಕೀಲರಾದ ಆನಂದ್ ಕುಮಾರ್, ಪುರಸಭಾ ಸದಸ್ಯರಾದ ರಾಘವೇಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ಮಾಜಿ ಸದಸ್ಯರಾದ ಶ್ರೀನಿವಾಸ್, ಲಕ್ಕೂರು ಜೆ.ಡಿ.ಎಸ್ ಯುವ ಮುಖಂಡರಾದ ಅಸ್ಲ್ಮಂ, ಪುರುಷೋತ್ತಮ್, ಶ್ರೀನಿವಾಸ ಗೌಡ, ಅರುಣ್, ಶ್ರೀನಿವಾಸ್, ಅಲಂಬಾಡಿ ಕೃಷ್ಣಮೂರ್ತಿ, ಕೃಷ್ಣರೆಡ್ಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಡ ಶಾಲಾ ವಿಭಾಗ ಉಪ ಪ್ರಾಂಶುಪಾಲರಾದ ಅಲೀಂಉನ್ನಿಸಾ, ಶಿಕ್ಷಕರಾದ ಮಮತಾ, ಎನ್. ಮುನಿರತ್ನಮ್ಮ, ಸುಭದ್ರ, ಶೇಷಾದ್ರಿ, ದೈಹಿಕ ಶಿಕ್ಷಕರಾದ ಪುರುಷೋತ್ತಮ್, ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.