ಬಂಟ್ವಾಳ (www.vknews.com) : ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ದೇಶದ ಸೌಹಾರ್ದತೆಗಾಗಿ ಉಪ್ಪಿನಂಗಡಿಯಿಂದ ಲಡಾಕ್ ವರೆಗೆ ಸುಮಾರು 2984 ಕಿ.ಮಿ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವ ಮೂಲಕ ಪ್ರಯಾಣದುದ್ದಕ್ಕೂ ದೇಶ ಪ್ರೇಮ, ರಾಷ್ಟ ಧ್ವಜದ ಮಹತ್ವ, ಆಹಾರ ಪೋಲು,ಧಾರ್ಮಿಕ ಸೌಹಾರ್ದತೆ ಮುಂತಾದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಸಾಧನೆ ನಡೆಸಿ ಮರಳಿ ಮಂಗಳೂರಿನಿಂದ ಮರಳಿ ಉಪ್ಪಿನಂಗಡಿಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿದ ಉಪ್ಪಿನಂಗಡಿಯ ಯುವಕರಾದ ನೌಶಾದ್ ಬಿ.ಕೆ.ಎಸ್ ಮತ್ತು ಅಬ್ದುಲ್ ಹಕೀಂ ರವರಿಗೆ ಬಂಟ್ವಾಳ ಕೈಕಂಬದ ಹೆದ್ದಾರಿ ಬಳಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಸ್ಡಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರಿಯಾಝ್ ಫರಂಗಿಪೇಟೆಯವರು ಮಾತನಾಡಿ ಯುವಕರ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕ್ಷೇತ್ರ ಸಮಿತಿ ಕಾರ್ಯದರ್ಶಿ ಹಾಗೂ ಬಂಟ್ವಾಳ ಪುರಸಭೆಯ ಸದಸ್ಯರಾದ ಮುನೀಶ್ ಅಲಿ, ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಪುರಸಭಾ ಸಮಿತಿ ಅಧ್ಯಕ್ಷರಾದ ಶೆರೀಫ್.V, ಕಾರ್ಯದರ್ಶಿ ಇಕ್ಬಾಲ್ ಮೈನ್ಸ್, ಕ್ಷೇತ್ರ ಸಮಿತಿ ಸದಸ್ಯರಾದ ಇಕ್ಬಾಲ್ ನಂದರ ಬೆಟ್ಟು, ಎಸ್ಡಿಟಿಯು ಟೆಂಪೋ ಚಾಲಕರ ಸಂಘದ ಅಧ್ಯಕ್ಷ ಅಶ್ರಫ್ ಕೊಡಂಗೆ, ಶಾಂತಿ ಅಂಗಡಿ ಬ್ರಾಂಚ್ ಅಧ್ಯಕ್ಷರಾದ ಇಸಾಕ್ ಅದ್ದೇಡಿ, ಬಶೀರ್ ಪಲ್ಲ, ಮಜೀದ್ ಆಲಡ್ಕ ಸಾಹುಲ್ ತಲಪಾಡಿ, ಅಶ್ರಫ್ ತಲಪಾಡಿ ಮತ್ತು ಇತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.