ಅಬುಧಾಬಿ (www.vknews.com) : ಕನ್ನಡ ರಾಜ್ಯೋತ್ಸವ ಮತ್ತು ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕನ್ನಡಿಗರಿಗಾಗಿ ಇದೆ ಬರುವ ಅಕ್ಟೊಬರ್ ತಿಂಗಳ 15ಕ್ಕೆ ಜಧಾಫ್ ಹುಲ್ಲಿನ ಮೈದಾನದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 12ಗಂಟೆವರೆಗೆ ಹೊನಲು ಬೆಳಕಿನಿಂದ ಕೂಡಿದ ದಸರಾ ಕಪ್ ಕ್ರಿಕೆಟ್ ಕನ್ನಡಿಗರ ಪ್ರೀಮಿಯರ್ ಲೀಗ್ ( ಕೆ ಪಿ ಎಲ್ ) ನನ್ನು ಆಯೋಜಿಸಿದ್ದಾರೆ.
ಈ ಪಂದ್ಯಾವಳಿಯು 2019ರಲ್ಲಿ 28ತಂಡಗಳು ಭಾಗವಹಿಸಿದ್ದು ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ನಡೆಯದೆ ಹೋದ ಪಂದ್ಯಾಟಕ್ಕೆ ಸಂಘಟಕರು ಮರುಜೀವ ನೀಡಿದ್ದು ಈ ವರ್ಷ ಕರ್ನಾಟಕದ ವಿವಿಧ ಭಾಗಗಳಿಂದ ಯುನೈಟೆಡ್ ಅರಬ್ ಎಮಿರೇಟಿನಲ್ಲಿ ನೆಲಸಿರುವ ಕನ್ನಡಿಗರ 22ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿದ್ದಾರೆ ಎಂದು ತಿಳಿಸಿದ ಸಂಘಟಕರು ಈ ಪಂದ್ಯಾಟಕ್ಕೆ ಯಾವುದೇ ತಂಡಗಳಿಂದ ಯಾವುದೇ ಮೈದಾನ ಶುಲ್ಕ ಪಡೆಯದೇ ಕನ್ನಡಿಗರಿಗಾಗಿ ಉಚಿತವಾಗಿ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪಂದ್ಯ ಕೂಟವನ್ನು ಅನಿವಾಸಿ ಕನ್ನಡಿಗರ ಆಶಾಕಿರಣ, ಸಂಕಷ್ಟದಲ್ಲಿರುವ ಕನ್ನಡಿಗರಿಗೆ ತಕ್ಷಣ ಸ್ಪಂದಿಸುವ ಕೊಡುಗೈ ದಾನಿ ಹಲವು ಕನ್ನಡ ಸಂಘಗಳ ಪೋಷಕರಾದ ಎಮ್ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟನ್ಸಿ ಮಾಲೀಕರಾದ ಶ್ರೀಯುತ ಮೊಹಮ್ಮದ್ ಮುಸ್ತಫಾ ಕನ್ನಡಿಗ ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
ಪಂದ್ಯಕೂಟದ ಪ್ರಯುಕ್ತ ಮೊನ್ನೆ ಸ್ವಾತಿ ಗ್ರಾಂಡ್ ಹೋಟೆಲಿನಲ್ಲಿ ನಡೆದ ಆಯೋಜಕರು ಮತ್ತು ತಂಡದ ನಾಯಕರ ಸಭೆ ಕಾರ್ಯಕ್ರಮದಲ್ಲಿ ಹೆಮ್ಮೆಯ ಕನ್ನಡಿಗರು ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಮತ್ತು ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರು ಕ್ರಿಕೆಟ್ ಟ್ರೋಫಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದರು, ನಂತರ ದುಬೈ ದಸರಾ ಕ್ರೀಡೋತ್ಸವ ರ ಲಾಂಛನವನ್ನು ಸಮಿತಿಯ ಎಲ್ಲಾ ಪದಾಧಿಕಾರಿಗಳು ಸೇರಿ ಅನಾವರಣಗೊಳಿಸಿದರು , ಹಾಗೂ ಎಲ್ಲಾ ತಂಡದ ನಾಯಕರು ತಮ್ಮ ತಂಡದ ಜೆರ್ಸಿಯನ್ನು ಅನಾವರಣಗೊಳಿಸಿದರು ಮತ್ತು ಪಂದ್ಯಾಟದ ವೇಳಾಪಟ್ಟಿಯನ್ನು ಬಿಡುಗೊಡೆಗೊಳಿಸಿದರು.
ಈ ಕುರಿತ ಪತ್ರಿಕಾ ಘೋಷ್ಠಿಯಲ್ಲಿ ಕ್ರಿಕೆಟ್ ಸಂಯೋಜಕರಾದ ಕ್ಲೀವನ್, ಶಕೀಲ್, ಸುಧೀರ್, ವಾಸಿ, ಅಬ್ದುಲ್ ಹಾದಿ, ರೋಷನ್ ಮಂಗಳೂರು, ವರದರಾಜ್ ಬೆಂಗಳೂರು ಮತ್ತು ಸಂಘಟಕ ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಮಮತಾ ಮೈಸೂರು, ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮುಖ್ಯ ಕಾರ್ಯದರ್ಶಿ ಸೆಂತಿಲ್ ಬೆಂಗಳೂರು, ಮುಖ್ಯ ಸಂಯೋಜಕರಾದ ರಫೀಕಲಿ ಕೊಡಗು, ಮಹಿಳಾ ಘಟಕದ ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ಮಮತಾ ಶಾರ್ಜಾ, ಡಾ.ಸವಿತಾ ಮೈಸೂರು,ಅನಿತಾ ಬೆಂಗಳೂರು ಹಾಗೆ ವಿಷ್ಣುಮೂರ್ತಿ, ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ಮತ್ತು ಉಪ ಸಮಿತಿ ಸದಸ್ಯರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.