ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಆಂಜನೇಯಸ್ವಾಮಿ ಆರಾಧನೆಯಿಂದ ಶನಿಕಾಟ ಹಾಗೂ ಯಮಧರ್ಮನ ಕಾಟವು ಇರುವುದಿಲ್ಲ . ಪ್ರಾಣ ಕೊಡುವುದು ಹಾಗೂ ಪ್ರಾಣ ತೆಗೆದುಕೊಂಡು ಹೋಗುವುದು ಕಲಿಯುಗಬ್ರಹ್ಮ ಆಂಜನೇಯಸ್ವಾಮಿ ಎಂದು ಅಂಚೆರತ್ನ ಡಾ.ಪೋಸ್ಟ್ ನಾರಾಯಣಸ್ವಾಮಿ ತಿಳಿಸಿದರು.
ಕೋಲಾರ ತಾಲ್ಲೂಕು ಅರಳಿಮರದ ಹೊಸಹಳ್ಳಿ ಅಂಜನಯ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾಡನಾಡಿದರು . ಊರಿನ ಎಲ್ಲಾ ಭಕ್ತಾದಿಗಳು ಸೇರಿ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು . ಇಡೀ ರಾತ್ರಿ ಅಖಂಡ ಭಜನೆಯನ್ನು ಏರ್ಪಡಿಸಲಾಗಿತ್ತು .
ಕಾರ್ಯಕ್ರಮದಲ್ಲಿ ವೇಣುಗೋಪಾಲಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾದ ವಾಣಿಶ್ರೀ ಹಾಗೂ ಭಗವಾನ್ ಸಿಂಗ್ರವರು ಸೇರಿ ಎಲ್ಲಾ ಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಿದರು . ಕಾರ್ಯಕ್ರಮದಲ್ಲಿ ವಾಣಿಶ್ರೀ , ರಾಮಕ್ಕ , ಪ್ರೇಮ , ಜನ್ನಘಟ್ಟ ಕೃಷ್ಣಮೂರ್ತಿ , ಮುನಿವೆಂಕಟಮ್ಮ , ರತ್ನಮ್ಮ ಪಾರ್ವತಮ್ಮ ಗೌರಮ್ಮ , ಭಾಗ್ಯಮ್ಮ , ಲಕ್ಷ್ಮಮ್ಮ , ಶ್ರೀನಿವಾಸರೆಡ್ಡಿ , ಜಯರಾಮಯ್ಯ , ಎಂ.ಶ್ರೀನಿವಾಸಯ್ಯ , ಸುಗಟೂರು ಬಳೇ ಗೌರಮ್ಮ , ಕಿಶೋರ್ ಕುಮಾರ್ , ಬಳೇ ಸೀತಾರಾಮಯ್ಯ ಅರಹಳ್ಳಿ ಗೋಪಾಲಪ್ಪ , ಕೋಲಾರ ವಿಶ್ವನಾಥ , ಸಂಜೀವಪ್ಪ , ಎಂ.ನಾರಾಯಣಸ್ವಾಮಿ , ಮೀಸೆ ವೆಂಕಟೇಶಪ್ಪ , ಗ್ರಾಮ ಪಂಚಾಯಿತಿ ಸದಸ್ಯರು ಆಂಜನಪ್ಪ , ರಾಮಲಕ್ಷ್ಮಮ್ಮ , ಮುದುವಾಡಿ ಬಾಷ , ಗಂಗಾಭವಾನಿ ಸಂಘ , ಚೌಡೇಶ್ವರಿ ಸಂಘ , ಹರಿಕೃಷ್ಣ ಜಾನಪದ ಸಂಘ , ವೇಣುಗೋಪಾಲ ಸಂಘದ ಅಧ್ಯಕ್ಷರುಗಳು ಮತ್ತು ಇನ್ನಿತರರು ಭಾಗವಹಿಸಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.