ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಕೋವಿಡ್ ಸಂಕಷ್ಟದಿಂದ ಮುಚ್ಚಿದ್ದ ಶಾಲೆಗಳು ಶುಭಾರಂಭಗೊಂಡಿದ್ದು , ಜಿಲ್ಲೆಯ ೧೨೦೯ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ೧ –೫ ನೇ ತರಗತಿಗೆ ಇಂದು ೮೮೧೩೭ ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಶೇ .೮.೨ ರಷ್ಟು ಮಕ್ಕಳು ಶಾಲೆಗೆ ಆಗಮಿಸಿದ್ದು , ಎಲ್ಲಾ ಕಡೆಗಳಲ್ಲೂ ಹಬ್ಬದ ಸಂಭ್ರಮ ಕಂಡು ಬಂದಿದೆ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ತಿಳಿಸಿದ್ದಾರೆ .
ಜಿಲ್ಲೆಯಲ್ಲಿ ಸರ್ಕಾರದ ಸೂಚನೆಯಂತೆ ೧ ರಿಂದ ೫ ನೇ ತರಗತಿಗಳನ್ನು ಆರಂಭಿಸಿದ್ದು , ಮಕ್ಕಳು , ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ . ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಡಿ ಒಟ್ಟು ೧೨೦೯ ಸರ್ಕಾರಿ , ಅನುದಾನಿತ , ಅನುದಾನ ರಹಿತ ಪ್ರಾಥಮಿಕ ಶಾಲೆಗಳಿದ್ದು , ಒಟ್ಟು ೧,೧೦೫೩೩ ವಿದ್ಯಾರ್ಥಿಗಳು ನೋಂದಾಯಿಸಿದ್ದು , ಅವರಲ್ಲಿ ೮೮೧೩೭ ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ .
ಕೋವಿಡ್ಮಾರ್ಗಸೂಚಿ ಪಾಲನೆಗೆ ಕಮ
ಶಾಲೆಗಳನ್ನು ತಳಿರು ತೋರಣ , ರಂಗೋಲಿಗಳಿಂದ ಸಿಂಗರಿಸಲಾಗಿದ್ದು , ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ದ್ವಾರದಲ್ಲಿ ಶಿಕ್ಷಕರು ಸ್ವಾಗತಿಸಿ ಬರಮಾಡಿಕೊಂಡರು . ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಿ ಸರದಿ ಸಾಲಿನಲ್ಲಿ ಬಂದ ಮಕ್ಕಳಿಗೆ ಥರ್ಮಲ್ ಸ್ಟೀನಿಂಗ್ ಮಾಡಿ , ಸ್ಯಾನಿಟೈಸರ್ ನೀಡಿ ಒಳ ಬರಮಾಡಿಕೊಳ್ಳಲಾಯಿತು . ಜತೆಗೆಮಕ್ಕಳಿಗೆ ಕುಡಿಯಲು ಬಿಸಿ ನೀರು ಒದಗಿಸಲು ಶಾಲೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು .
ನಗರದ ಕುರುಬರಪೇಟೆ ಶಾಲೆಯಲ್ಲಿ ವಿಭಾಗಾಧಿಕಾರಿಗಳ ಕಾರು ಚಾಲಕ ನಾಗರಾಜ್ ಸ್ವತಃ ಶಾಲೆಗೆ ಆಗಮಿಸಿ ಮಕ್ಕಳಿಗೆ ಸಿಹಿ , ಲೇಖನಿ ಹೂ ನೀಡಿ ಸ್ವಾಗತಿಸಿದರು .
ಶಾಲೆಗಳಲ್ಲಿ ಸಂಭ್ರಮ ಜಾಗೃತಿಗೆ ಮೀಸಲು
ಬಂದ ಮಕ್ಕಳನ್ನು ಸಾಮಾಜಿಕ ಅಂತರ ಕಾಪಾಡುವ ಮೂಲಕ ಆವರಣದಲ್ಲಿ ಕೂರಿಸಿ ಶಿಕ್ಷಕರು ಕೋವಿದ್ ಸಂದರ್ಭದಲ್ಲಿ ವಹಿಸಬೇಕಾದ ಜಾಗೃತಿ , ಮಾರ್ಗಸೂಚಿ ಪಾಲನೆ ಕುರಿತು ಮಾರ್ಗದರ್ಶನ ನೀಡಿದರು . ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳೂ ಸಹಾ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಡಿಪಿಐ ಎಸ್.ಜಿ.ನಾಗೇಶ್ ಸೂಚನೆ ನೀಡಿದ್ದು , ಮಕ್ಕಳ ಸುರಕ್ಷತೆಗೆ ಕುತ್ತಾಗದಂತೆ ಎಚ್ಚರವಹಿಸಲು ತಾಕೀತು ಮಾಡಿದ್ದಾರೆ .
ಮಧ್ಯಾಹ್ನ ಮಾತ್ರ ಮಕ್ಕಳಿಗೆ ತರಗತಿ
೧-೫ ನೇ ತರಗತಿಗಳು ಇಂದು ಆರಂಭವಾಗಿದ್ದು , ನ ೨ ರವರೆಗೂ ಬೆಳಗ್ಗೆ ೧೦-೩೦ ರಿಂದ ೧ ಗಂಟೆವರೆಗೂ ಮಾತ್ರ ನಡೆಯಲಿದೆ ಎಂದು ತಿಳಿಸಿರುವ ಅವರು , ಈ ಮಕ್ಕಳಿಗೆ ಸದ್ಯ ಬಿಸಿಯೂಟವನ್ನು ನೀಡಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ . ಶಾಲೆಗೆ ಬರುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿ ಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿರುವ ಡಿಡಿಪಿಐ ಅವರು , ಪೋಷಕರಿಗೆ ಎರಡು ಡೋಸ್ ಲಸಿಕೆ ಹಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ .
ಶಾಲೆಗಳಲ್ಲಿನ ಸ್ವಚ್ಛತೆ , ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತಂತೆ ನಿಗಾ ವಹಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ , ತಾಲ್ಲೂಕುವಾರು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸ ನೇತೃತ್ವದಲ್ಲೂ ಸಮನ್ವಯಯಾಧಿಕಾರಿಗಳ ತಂಡಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ ಎಂದು ತಿಳಿಸಿದ್ದಾರೆ . ಇದು ಕೋವಿಡ್ ಹೆಮ್ಮಾರಿ ವಿರುದ್ಧದ ಹೋರಾಟದಲ್ಲಿ ಶಾಲೆ ಆರಂಭ ಒಂದು ದಿಟ್ಟ ಹೆಜ್ಜೆಯಾಗಿದ್ದು , ಮಕ್ಕಳು , ಪೋಷಕರ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.