ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕೆ. ಸಿ. ಫ್ ಒಮಾನ್ ಮಸ್ಕತ್ ಝೋನ್ ಆಯೋಜಿಸುತ್ತಿರುವ ಮಹಿಳಾ ತರಗತಿಯ ವಿದ್ಯಾರ್ಥಿನಿಯರಿಂದ ರಬಿವುಲ್ ಅವ್ವಲ್ ನ ಭಾಗವಾಗಿ ದಿನಾಂಕ 20-10-2021 ರಂದು ಬುಧವಾರ “ಮೆಹೆಫಿಲೇ ರಬೀಹ್ ಮೀಲಾದ್ ಜಲ್ಸ 2021” ಎನ್ನುವ ಕಾರ್ಯಕ್ರಮವು zoom ಮೂಲಕ ಬಹಳ ಅಚ್ಚುಕಟ್ಟಾಗಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ಮಧ್ಯಾಹ್ನ 2.45 ಕ್ಕೆ ಸರಿಯಾಗಿ ತರಗತಿಯ ಮುದರ್ರಿಸತ್ ಆಶಿಕಾ ಜಿನಾನ್ ರವರ ನೇತ್ರತ್ವದಲ್ಲಿ ಮೌಲಿದ್ ಹಾಗೂ ದುವಾದ ಮೂಲಕ ಕಾರ್ಯಕ್ರಮವು ಆರಂಭಗೊಂಡಿತು. ವಿದ್ಯಾರ್ಥಿನಿ ಜಸೀಲಾರವರು ಕಿರಾಅತ್ ಓದಿದ ನಂತರ ಮಹಿಳಾ ತರಗತಿ ಸಮಿತಿಯ ಉಪಾಧ್ಯಕ್ಷೆ ಝೀನತ್ ರವರು ಸ್ವಾಗತ ಭಾಷಣವನ್ನು ಮಾಡಿದರು. ನಂತರ ಮುದರ್ರಿಸತ್ ಸಈದಾ ಫಾತಿಮಾ ಅಲ್ ಮಾಹಿರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ತರಗತಿ ಸಮಿತಿಯ ಅಧ್ಯಕ್ಷೆ ರಮ್ಲತ್ ಮುಮ್ತಾಝ್ ಅಧ್ಯಕ್ಷ ಭಾಷಣವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ತಗರಗತಿಯ ವಿದ್ಯಾರ್ಥಿನಿಗಳು ಮರ್ಹಬಾ ಬೈತ್, ಕನ್ನಡ ಭಾಷಣ, ಮಹಿಳಾ ತಗರಗತಿಯ ಬಗ್ಗೆ ಅನಿಸಿಕೆ, ಮಲಯಾಳಂ ಮದ್ಹ್ ಹಾಡು, ಬ್ಯಾರಿ ಭಾಷಣ, ಲೈಫ್ ಏನ್ರೀಚ್ಮೆಂಟ್ ಟಿಪ್ಸ್, ಬ್ಯಾರಿ ಮದ್ಹ್ ಹಾಡು, ಬೆಸ್ಟ್ ಪೇರೆಂಟಿಂಗ್ ಟಿಪ್ಸ್, ಮಲಯಾಳಂ ಭಾಷಣ, ಬುರ್ದಾ ಬೈತ್, ಅಶ್ರಕ ಬೈತ್ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಮಹಿಳಾ ತರಗತಿಯ ಮುದರ್ರಿಸತ್ ಫಾತಿಮಾ ಶಿಫಾನಾ ಅಲ್ ಮಹಿರಾರವರು ಪ್ರವಾದಿ ಪ್ರೇಮದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿನಿ ಸೌದರವರು ಎಲ್ಲರಿಗೂ ಧನ್ಯವಾದಗಳು ಹೇಳಿ ಸಲಾಂ ಬೈತ್ ನ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.
ದಿನಾಂಕ 22-10-2021ರಂದು ಮಹಿಳಾ ತರಗತಿಯ ವಿದ್ಯಾರ್ಥಿನಿಯರು “ಮೆಹೆಫಿಲೇ ರಬೀಹ್ ಮೀಲಾದ್ ಜಲ್ಸ 2021” ಕಾರ್ಯಕ್ರಮವನ್ನು ಹಾಜಿ ಇಬ್ರಾಹಿಂ ಅತ್ರಾಡಿಯವರ ನಿವಾಸದಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 5.30 ಯವರೆಗೆ ವಿಜೃಂಭಣೆಯಿಂದ ನಡೆಸಿದರು.
ಕಾರ್ಯಕ್ರಮದ ಮೊದಲಿಗೆ ಮೌಲಿದ್ ಹಾಗೂ ದುವಾದ ಮೂಲಕ ಆರಂಭಿಸಲಾಯಿತು. ನಂತರ ಮಹಿಳಾ ತರಗತಿಯ ವಿದ್ಯಾರ್ಥಿನಿಯರ ಮಕ್ಕಳಿಗೆ ಬೇಕಾಗಿ ನೆಬಿ ದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಮಕ್ಕಳಿಂದ ಬುರ್ದಾ ಮಜ್ಲಿಸ್ ನಡೆಯಿತು. ಮಹಿಳಾ ತರಗತಿಯ ವಿದ್ಯಾರ್ಥಿನಿಯರ ನೆಬಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳಾ ತರಗತಿಯ ಕಲಿಕಾ ಚಟುವಟಿಕೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪಾರಿತೋಷಕವನ್ನು ನೀಡಿ ಅಭಿನಂದಿಸಲಾಯಿತು ಹಾಗೂ ಮೀಲಾದ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ತರಗತಿಯ ವಿದ್ಯಾರ್ಥಿನಿಯರು ಸೋಹರ್, ನಿಜ್ವಾ, ಸೀಬ್, ಮಸ್ಕತ್ ನ ವಿವಿಧ ಭಾಗಗಳಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕೊನೆಗೆ ಮಹಿಳಾ ತರಗತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಬಿದಾ ಸುಲ್ತಾನ ಧನ್ಯವಾದವನ್ನು ಅರ್ಪಿಸಿದರು. ಸಲಾಂ ಬೈತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.