ಸೌದಿ ಅರೇಬಿಯಾ (www.vknews.in) ; ಮಕ್ಕಾದಲ್ಲಿ ಉಮ್ರಾ ನಿರ್ವಹಿಸುವಾಗ ಕುಸಿದು ಬಿದ್ದು ಕಣ್ಣೂರು ಮಯಿಲ್ ಕುಟ್ಟಿಯಾತೂರ್ ಮೂಲದ ಮಹಿಳೆಯೊಬ್ಬರು ನಿಧನರಾಗಿದ್ದಾರೆ. ಹಾಫಿಝ್ ಶರಫುದ್ದೀನ್ ಸಖಾಫಿ ವೆಳ್ಳಿಕಲ್ ಎಂಬವರ ಪತ್ನಿ ಸುಹೈಲಾ (26) ಮೃತರು.
ಉಮ್ರಾ ಮುಗಿಸಿ ತವಾಫ್ ಮಾಡಿದ ಬಳಿಕ ತನ್ನೊಂದಿಗಿದ್ದ ಮಹಿಳೆಯರನ್ನು ಪ್ರಾರ್ಥನೆಗೆ ಕರೆದೊಯ್ಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಮಕ್ಕಳು: ಮಹಮ್ಮದ್ ಮತ್ತು ಶಾಸಿಯಾ. ಈಕೆ ಅಬ್ದುರ್ ರೆಹಮಾನ್ ಮತ್ತು ಕುಂಞಮೀನಾ ದಂಪತಿಯ ಪುತ್ರಿ. ಮಕ್ಕಾದಲ್ಲಿ ದಫನ ಮಾಡಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.