ಕಾರ್ಕಳ (www.vknews.com) : ನಮ್ಮ ನಾಡ ಒಕ್ಕೂಟ(ರಿ) ಕಾರ್ಕಳ ಘಟಕ, ಇದರ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ಇ ಶ್ರಮ್ ಕಾರ್ಡನ್ನು “ಮುಹಿಯುದ್ದೀನ್ ಜುಮಾ ಮಸೀದಿ, ನೆಲ್ಲಿಕಾರು, ಇದಕ್ಕೆ ಒಳಪಟ್ಟ ಮದ್ರಸ, “ಇನಾಮತುಲ್ ಉಲೂಮ್”, ಇದರ ಆವರಣದಲ್ಲಿ ಆದಿತ್ಯವಾರ ದಿನಾಂಕ 02-01.2022 ರಂದು ಮಧ್ಯಾಹ್ನ ಘಂಟೆ 2-30 ಗೆ ಆಯೋಜಿಸಲಾಗಿತ್ತು. ಇದಕ್ಕೆ ನಮ್ಮ ನಾಡ ಒಕ್ಕೂಟ ಇದರ ಹೆಬ್ರಿ ಘಟಕ, ಉಡುಪಿ ಜಿಲ್ಲಾ ಹಾಗೂ ಸೆಂಟ್ರಲ್ ಕಮಿಟಿಯ ಸಹಕಾರವಿತ್ತು. ಕಾರ್ಯಕ್ರಮವು ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಇವರ ಕಿರಾತ್ ನೊಂದಿಗೆ ಆರಂಭಗೊಂಡಿತು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ, ಕಾರ್ಕಳ ತಾಲೂಕು, ಇದರ ಅಧ್ಯಕ್ಷರಾದ ಶಾಕಿರ್ ಹುಸೈನ್, ಬೈಲೂರು, ವಹಿಸಿದ್ದರು. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿಯವರು ನಮ್ಮ ನಾಡ ಒಕ್ಕೂಟದ ಧ್ಯೇಯೋದ್ದೇಶಗಳಾದ, ನಮ್ಮೆಲ್ಲರ ಐಕ್ಯತೆ, ಶಿಕ್ಷಣ,ಹಾಗೂ ನೈತಿಕ ಏಳಿಗೆಯ ಬಗ್ಗೆ ವಿವರಿಸಿದರು. ಕೊನೆಗೆ ಶಾಕಿರ್ ಹುಸೈನ್ ರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ವೇದಿಕೆಯಲ್ಲಿ ಸಿ.ಎಚ್. ಪುತ್ತಬ್ಬ (ಗೌರವಾಧ್ಯಕ್ಷರು, ಮೊಹಿಯುದ್ದೀನ್ ಜುಮಾ ಮಸೀದಿ, ನೆಲ್ಲಿಕಾರು, ಹಾಗೂ ಫೈರೋಝ್ (ಕಾರ್ಯದರ್ಶಿಗಳು ಮೊಹಿಯುದ್ದೀನ್ ಜುಮಾ ಮಸೀದಿ, ನೆಲ್ಲಿಕಾರು, ಹಾಗೂ ಉಮ್ಮರ್ ಸಾಹೇಬ್ ರವರು ಉಪಸ್ಥಿತರಿದ್ದರು.ಶೇಖ್ ಶಬ್ಬೀರ್ ಅಹ್ಮದ್ ಮಿಯಾರು (ಕಾರ್ಯದರ್ಶಿಗಳು ನಮ್ಮ ನಾಡ ಒಕ್ಕೂಟ, ಕಾರ್ಕಳ) ಕಾರ್ಯಕ್ರಮನ್ನು ನಿರೂಪಿಸಿ ಧನ್ಯವಾದವಿತ್ತರು.
ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀನಮ್ಮ ನಾಡ ಒಕ್ಕೂಟ, ಕಾರ್ಕಳ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.