(ವಿಶ್ವ ಕನ್ನಡಿಗ ನ್ಯೂಸ್) : ಕೊರೊನಾ ಸಾಂಕ್ರಾಮಿಕ ಸೋಂಕಿನಿಂದ ಯಾವುದೇ ರಾಷ್ಟ್ರಗಳು ತಪ್ಪಿಸಿಕೊಂಡಿಲ್ಲ. ಪ್ರಸ್ತುತ ಕೊರೊನಾ ವೈರಸ್ ಸೋಂಕನ್ನು ಎದುರಿಸಲು ಹಾಗೂ ಈ ಸೋಂಕಿಗೆ ಚಿಕಿತ್ಸೆಯನ್ನು ನೀಡಲು ನಮ್ಮ ಬಳಿ ಹಲವಾರು ಅಸ್ತ್ರಗಳು ಇದೆ. ಎಷ್ಟು ಸಮಯದವರೆಗೆ ಈ ಅಸಮಾನತೆಯು ಇರುತ್ತದೆಯೋ ಅಷ್ಟರವರೆಗೆ ಕೊರೊನಾ ವೈರಸ್ ಸೋಂಕು ಇರಲಿದೆ. ಅಸಮಾನತೆ ಅಧಿಕವಾದಂತೆ ಕೊರೊನಾ ವೈರಸ್ ಸಾಂಕ್ರಾಮಿಕವೂ ಕೂಡಾ ಅಧಿಕವಾಗಲಿದೆ. ನಾವು ಅಸಮಾನತೆಯನ್ನು ಅಂತ್ಯ ಮಾಡಿದರೆ, ಸಾಂಕ್ರಾಮಿಕವನ್ನು ಕೂಡಾ ಅಂತ್ಯ ಮಾಡಲು ಸಾಧ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ.
ನಾವೀಗ ಕೊರೊನಾ ವೈರಸ್ ಸಾಂಕ್ರಾಮಿಕದ ಮೂರನೇ ವರ್ಷಕ್ಕೆ ಕಾಲಿರಿಸಿದ್ದೇವೆ. ಈ ವರ್ಷವೇ ಕೋವಿಡ್ ಸಾಂಕ್ರಾಮಿಕ ಅಂತ್ಯವಾಗಲಿದೆ ಎಂಬ ಭರವಸೆ ನನಗೆ ಇದೆ. ನಾವು ಜೊತೆಯಾಗಿ ಕೋವಿಡ್ ಅನ್ನು ಎದುರಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.