(ವಿಶ್ವ ಕನ್ನಡಿಗ ನ್ಯೂಸ್) : ಆತ ಕೇವಲ ಭಾರತೀಯ ತಂಡದ ಯಶಸ್ವಿ ನಾಯಕನಲ್ಲ, ವಿಶ್ವ ಕ್ರಿಕೆಟ್ನ ಅತ್ಯಂತ ಯಶಸ್ವೀ ನಾಯಕ ಎಂದು ಟೆಸ್ಟ್ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಅಂಕಿಅಂಶಗಳು ಸುಳ್ಳು ಹೇಳಲಾರವು. ಆತ ಕೇವಲ ಭಾರತೀಯ ತಂಡದ ಯಶಸ್ವಿ ನಾಯಕ ಮಾತ್ರವಲ್ಲ. ವಿಶ್ವ ಕ್ರಿಕೆಟ್ನ ಅತ್ಯಂತ ಯಶಸ್ವೀ ನಾಯಕನೂ ಹೌದು. ನಿಮ್ಮ ಬ್ಯಾಟ್ನಿಂದ ಮತ್ತಷ್ಟು ಅದ್ಭುತವಾದ ಇನ್ನಿಂಗ್ಸ್ಗಳು ಬರುವುದನ್ನು ನೋಡಲು ಕಾಯುತ್ತಿದ್ದೇನೆ. ಭಾರತೀಯ ತಂಡವನ್ನು ಮುನ್ನಡೆಸುವುದು ಯಾವಾಗಲೂ ವಿಶೇಷವಾದ ಗೌರವ. ಆದರೆ ಈ ತಂಡದ ನಾಯಕತ್ವದಿಂದ ಕೆಳಕ್ಕಿಳಿಯುವುದು ಅತ್ಯಂತ ಭಾವುಕ ಕ್ಷಣ. ಈ ಪಯಣ ಅತ್ಯಂತ ಅದ್ಭುತವಾಗಿತ್ತು ವಿರಾಟ್ ಕೊಹ್ಲಿ” ಎಂದು ಅಜರುದ್ದೀನ್ ಟ್ವೀಟ್ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.