ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಅವರನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ದೇವರಾಜ್ ಅವರು , ನೌಕರರು ಕಾರ್ಯಾಂಗದ ಭಾಗವಾಗಿದ್ದೇವೆ , ಜನರ ಕೆಲಸವನ್ನು ಕರ್ತವ್ಯವಾಗಿ ಮಾಡಿ ಎಂದು ತಿಳಿಸಿ , ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಾತನ್ನು ನಿಜವಾಗಿಸೋಣ ಎಂದರು .
ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಸರ್ಕಾರಿ ನೌಕರರಿಗೆ ಕಿರುಕುಳ , ಬ್ಲಾಕ್ಮೇಲ್ ಮತ್ತಿತರ ಪ್ರಕರಣಗಳು ನಡೆಯುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಅಂತಹ ಪ್ರಕರಣಗಳಿದ್ದರೆ ತಿಳಿಸಿದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಾವು ಸಾರ್ವಜನಿಕರ ಸೇವಕರು , ಜನರ ಕೆಲಸ ಮಾಡಲು ಅಡ್ಡಿಯುಂಟು ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ನೌಕರರ ಇಂತಹ ಸಮಸ್ಯೆಗಳಿಗೆ ಪೊಲೀಸ್ ಇಲಾಖೆ ಸದಾ ಜತೆಗಿರಲಿದೆ ಎಂದು ತಿಳಿಸಿದರು.
ನೌಕರರ ಸ೦ಘದ ಜಿಲ್ಲಾಧ್ಯಕ್ಷ ಜಿ.ಸುರೇಶ್ ಬಾಬು ನೌಕರರು ಯಾವುದೇ ಆತಂಕವಿಲ್ಲದಂತೆ ಸರ್ಕಾರದ ಕೆಲಸ ನಿರ್ವಹಿಸಲು ಪೂರಕವಾದ ವಾತಾವರಣ ನಿರ್ಮಿಸಿಕೊಡಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕೋರಗಂಡಹಳ್ಳಿ ನಾರಾಯಣಸ್ವಾಮಿ , ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ಖಜಾಂಚಿ ಕೆ.ವಿಜಯ್ , ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ , ಉಪಾಧಕರಾದ ಸುಬ್ರಮಣಿ , ಅಜಯ್ ಕುಮಾರ್ , ಪುರುಷೋತ್ತಮ್ , ಎಂ.ನಾಗರಾಜ್ , ಮಂಜುನಾಥ್ , ಕಾರ್ಯದರ್ಶಿಗಳಾದ ಶಿವಕುಮಾರ್ , ವಿಜಯಮ್ಮ , ಜಂಟಿ ಕಾರ್ಯದರ್ಶಿ ನವೀನಾ , ಸುರೇಂದ್ರ , ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ನಾಗರಾಜ್ ಮತ್ತಿತರರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.