ಮಂಗಳೂರು (www.vknews.in) : ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲಾವೆಸ್ಟ್ ಇದರ ವತಿಯಿಂದ ದಿಸ್ಟ್ರಿಕ್ ಕ್ಲಾಸ್ ರೂಮ್ ಕಾರ್ಯಕ್ರಮ ಮುಡಿಪು ತಾಜುಲ್ ಉಲಮಾ ಮಹಿಳಾ ಕಾಲೇಜು ವಠಾರದಲ್ಲಿ ಇತ್ತೀಚೆಗೆ ಜರಗಿತು.
ಜಿಲ್ಲಾ ಅಧ್ಯಕ್ಷ ಮಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಝಾಕ್ ಮದನಿ ಅಲ್ ಕಾಮಿಲ್ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಮದನಿ ಸಾಮಣಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಬಹು ವಿ.ಯು.ಇಸ್ಹಾಕ್ ಝುಹ್ರಿ (ಕಾರ್ಯದರ್ಶಿ ಜಿಲ್ಲಾ ಸಾಂತ್ವನ ವಿಭಾಗ), ಬಹು.ಜಿ ಎಮ್ ಎಮ್ ಕಾಮಿಲ್ ಸಖಾಫಿ (ರಾಜ್ಯ ಸಂಘಟನಾ ಕಾರ್ಯದರ್ಶಿ), ಬಹು.ಬಶೀರ್ ಮದನಿ ಕೂಳೂರು ಕಾರ್ಯದರ್ಶಿ ಜಿಲ್ಲಾ ದಅವ ವಿಭಾಗ ಮುಂತಾದ ನೇತಾರರು ಭಾಗವಹಿಸಿ 21 ಸೆಂಟರ್ ಪದಾಧಿಕಾರಿಗಳಿಗೆ ತರಗತಿ ನಡೆಸಿಕೊಟ್ಟರು. ಜಿಲ್ಲಾ ಕೋಶಾಧಿಕಾರಿ ಬಾವ ಫಕ್ರುದ್ದೀನ್ ಧನ್ಯವಾದ ಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.