ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ರಾಜ್ಯವನ್ನು ಒಡಿಎಫ್ ಪ್ಲಸ್ ಮಾಡುವ ನಿಟ್ಟಿನಲ್ಲಿ.ಕೇಂದ್ರ ಸರಕಾರವು ಆಯೋಜಿಸಿರುವ “DUS KA DAM SWATCCHATA HAR DUM” (ಪ್ರತಿ ದಿನ ಸ್ವಚ್ಚತೆ ಕಡೆ ಹತ್ತು ಹೆಜ್ಜೆ ) ಬೃಹತ್ ಆಂದೋಲನಡಿ ಇಂದು ತಲಪಾಡಿ ಗ್ರಾಮ ಪಂಚಾಯತದ ಫಲಾಹ್ ಶಾಲೆ ಬಳಿ PWD ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಘನತ್ಯಾಜ್ಯಗಳನ್ನು ಎಸೆದು ಸ್ವಚ್ಚತಾ ನಿಯಮ ಉಲ್ಲಂಘನೆ ಮಾಡಿದ 2 ಜನರನ್ನು ಪತ್ತೆ ಹಚ್ಚಿ ಅವರನ್ನು ಕಸ ಎಸೆದ ಸಾರ್ವಜನಿಕ ಸ್ಥಳಕ್ಕೆ ಕರೆಸಿ ಅವರಿಂದಲೇ ಕಸ ತೆರವುಗೊಳಿಸಿ 3000/- ರೂ ದಂಡ ವಿಧಿಸಲಾಯಿತು.
ಈ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾವತಿ ಶೆಟ್ಟಿ, ಉಪಾಧ್ಯಕ್ಷರಾದ ಫಯಾಜ್ ಪಿ.ಎಚ್. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಟಿ. ಇಸ್ಮಾಯಿಲ್ , ಮೊಹಿದ್ದಿನ್ ಝಾಹೀರ್ ಮಾಜಿ ಸದಸ್ಯರುಗಳಾದ ಹಸೈನಾರ್ ಎಚ್, ಮಹಮ್ಮದ್ ಫಾರೂಕ್, ಸ್ಥಳೀಯ ಗ್ರಾಮಸ್ಥರಿದ್ದು ಸಹಕರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಘನತ್ಯಾಜ್ಯವನ್ನು ತ್ಯಾಜ್ಯ ವಿಲೇವಾರಿ ವಾಹನಕ್ಕೆ ಕೊಡುವಂತೆಯೂ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡು ಬಂದಲ್ಲಿ ದಂಡ/ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆಯೂ ಎಚ್ಚರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.