(ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಗೂನಡ್ಕ ಯೂನಿಟ್ ಇದರ 2021/22 ನೇ ಸಾಲಿನ ಮಹಾಸಭೆಯು ಸುನ್ನೀ ಸೆಂಟರ್ ಗೂನಡ್ಕದಲ್ಲಿ 26/01/2022 ರಂದು ಇಶಾ ನಮಾಝಿನ ಬಳಿಕ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಯೂನಿಟ್ ಅಧ್ಯಕ್ಷರಾದ ಜಾಬಿರ್ ಎಂ ಬಿ ಯವರು ವಹಿಸಿದರು, ಬದ್ರಿಯಾ ಜುಮಾ ಮಸೀದಿ ಖತೀಬರಾದ ಮುಹಮ್ಮದ್ ಅಲೀ ಸಖಾಫಿ ಉಸ್ತಾದರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಎಸ್ ವೈ ಎಸ್ ನಾಯಕರಾದಂತಹ ಅಬ್ದುಲ್ ಲತೀಫ್ ಸಖಾಫಿ ಉಸ್ತಾದರು ಸಂಘಟನಾ ತರಬೇತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಅಬ್ದುಲ್ಲ ಹಾಜಿ ಕೊಪ್ಪತಕಜೆ ಅಧ್ಯಕ್ಷರು ಬದ್ರಿಯಾ ಜುಮಾ ಮಸೀದಿ ಗೂನಡ್ಕ, ಉಮ್ಮರ್ ಪಿ ಎ ಕಾರ್ಯದರ್ಶಿಗಳು ಬದ್ರಿಯಾ ಜುಮಾ ಮಸೀದಿ ಗೂನಡ್ಕ, ಎಸ್ ಎಂ ಅಬ್ದುಲ್ಲ ಮಾಜಿ ಕಾರ್ಯದರ್ಶಿಗಳು ಬದ್ರಿಯಾ ಜುಮಾ ಮಸೀದಿ ಗೂನಡ್ಕ, ಹಾಗೂ ಎಸ್ ಎಸ್ ಎಫ್ ಹಾಗೂ ಎಸ್ ವೈ ಎಸ್ ನಾಯಕರಾದಂತಹ ನೌಶಾದ್ ಕೆರೆಮೂಲೆ, ಸಿದ್ದೀಕ್ ಕಟ್ಟೆಕಾರ್,ಹಾರಿಸ್ ಬೋರುಗುಡ್ಡೆ, ಹಾರಿಸ್ ಗೂನಡ್ಕ, ಮುನೀರ್ ಪ್ರಗತಿ, ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ರವರು ಆಗಮಿಸಿದರು.
ಹಾಗೂ ಸೆಕ್ಟರ್ ವೀಕ್ಷಕರಾಗಿ ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಬಿ ಎ , ಬಶೀರ್ ಕಲ್ಲುಮುಟ್ಲು, ಸಿಯಾದ್ ಸುಳ್ಯ, ಅತಿಥಿಗಳಾಗಿ ಎಸ್ ಎಸ್ ಎಫ್ ಕಲ್ಲುಗುಂಡಿ ಶಾಖೆಯ ಅಧ್ಯಕ್ಷರಾದ ರಂಶಾದ್ ಹಾಗೂ ವಿಸ್ಡಮ್ ಕಾರ್ಯದರ್ಶಿ ಜುನೈದ್ ರವರು ಆಗಮಿಸಿದರು.
ನಂತರ ನೂತನ ಸಮಿತಿ ರಚಿಸಲಾಯಿತು. ಇದರಲ್ಲಿ ನೂತನ ಅಧ್ಯಕ್ಷರಾಗಿ ಉನೈಸ್ ಪಿ ಯು ಗೂನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಇಸಾಕ್ ಗೂನಡ್ಕ, ಕೋಶಾಧಿಕಾರಿಯಾಗಿ ಅಝೀಝ್ ಗೂನಡ್ಕ ರವರನ್ನೂ ಎಂಟು ವಿಭಾಗದ ಕಾರ್ಯದರ್ಶಿ ಗಳನ್ನೊಂಳಗೊಂಡ 19 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಇಜಾಸ್ ಗೂನಡ್ಕರವರು ನಿರೂಪಿಸಿ ಇಸಾಕ್ ಗೂನಡ್ಕ ರವರು ಧನ್ಯವಾದವನ್ನು ಅರ್ಪಿಸಿದರು. ಕಾರ್ಯಕ್ರಮ ದಲ್ಲಿ SSF ಗೂನಡ್ಕ ಯುನಿಟ್ ನ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.