ಬೆಂಗಳೂರು (www.vknews.in) : ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ಕೋಮು ದ್ವೇಷ ಹೆಚ್ಚಾಗುತ್ತಿದೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಿರಂತರ ನಡಿಯುತ್ತಿದರು ಮುಖ್ಯಮಂತ್ರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಬದಲಿಗೆ ಕ್ರಿಯೆಗೆ ಪ್ರತಿಕ್ರಿಯೆ ಯಂದು ಹೇಳಿ ಕಿಡಿಗೇಡಿಗಳಿಗೆ ಪ್ರೋತ್ಸಾಹ ನೀಡಿದ್ದಾರೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೆಟ್ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾರ್ಥನಾ ಸ್ಥಳಗಳ ಮೇಲೆ ಗೂಂಡಾಗಳು ಹಲ್ಲೆ ಮಾಡುತ್ತಿದಾರೆ. ಸರ್ಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ ಪೂಜೆ ಪುರಸ್ಕಾರ ವರ್ಷನು ವರ್ಷಗಳಿಂದ ನಡೆಯುತ್ತಲೇ ಇದೆ, ಆದರೆ ಒಂದು ಶಾಲೆ ಯಲ್ಲಿ ಅಲ್ಪಸಂಖ್ಯಾತ ಮಕ್ಕಳಿಗೆ ವಾರದಲ್ಲಿ ಒಮ್ಮೆ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದಕ್ಕೆ ಅಲ್ಲಿ ಕೆಲ ಕೆಡೆಗೇಡಿಗಳು ಧಾಧಲೇ ನಡೆಸಿ,ಸರಕಾರ ದಿಂದ ಒತ್ತಡ ತಂದು ಮುಖ್ಯ ಶಿಕ್ಷಕಿ ಗೆ ವರ್ಗಾವಣೆ ಮಾಡಿದ್ದಾರೆ, ಅದೇ ರೀತಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ದಲ್ಲಿ ಬಹಳ ವರ್ಷ ಗಲ್ಲಿಂದ, ಹಿಂದೂ ದೇವಾಲಯ, ಕ್ರೈಸ್ತರ ಪಾರ್ಥನಾ ಮಂದಿರ ಮತ್ತು ಮುಸಲ್ಮಾನರ ಪ್ರಾರ್ಥನಾ ಸ್ಥಳ ಇದ್ದು ಇದುವರೆಗೆ ಸೌಹಾರ್ದತೆಯಿಂದ ನಡೆಯುತ್ತಿತ್ತು,
ಆದರೆ ಎರಡು ದಿನಗಳ ಹಿಂದೆ ಮತ್ತೆ ಕೆಲ ಹಿಂದೂ ಸಂಘಟನೆಯ ಕಾರ್ಯಕರ್ತರು ಕೇವಲ ಮುಸ್ಲಿಂ ಪ್ರಾರ್ಥನಾ ಸ್ಥಳಕ್ಕೆ ಗುರಿ ಮಾಡಿ ಅಲ್ಲಿ ದಾಂದಲೆ ನಡೆಸಿದ್ದಾರೆ, ಎರಡು ತಿಂಗಳ ದ ಅವಧಿಯಲ್ಲಿ ಎರಡು ಮುಸ್ಲಿಂ ಯುವಕರ ಹತ್ಯೆ ಹಿಂದೂ ಸಂಘಟನೆ ಯ ಕಾರ್ಯಕರ್ತರಿಂದ ನಡೆದಿದೆ, ಇಷ್ಟೆಲ್ಲಾ ನಡೆಯುತ್ತಿದ್ದರು ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕೂತಿದೆ, ಇದರಿಂದ ಅಲ್ಪಸಂಖ್ಯಾತರು ಭಯದ ವಾತಾವರಣ ದಲ್ಲಿ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣ ವಾಗಿದೆ, ಪರಿಸ್ಥಿತಿ ಹೀಗೆ ಮುಂದೂರಿದರೆ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ವಾಗಲಿದೆ, ಸರಕಾರ ಕೂಡಲೇ ಎಚ್ಚೆತ್ತು ಪರಿಸ್ಥಿತಿ ಹತೋಟಿಗೆ ತರಲು ಕಠಿಣ ಕ್ರಮಗಳು ತಗೆದುಕೊಳ್ಳಬೇಕು ಮತ್ತು ರಾಜ್ಯ ದಲ್ಲಿ ಅಶಾಂತಿಗೆ ಕಾರಣ ವಾಗುತ್ತಿರುವ ಸಂಘಟನೆ ಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.