(www.vknews.in) : ದೇರಳಕಟ್ಟೆ ಶಾಂತಿಭಾಗ್ ನಿವಾಸಿಯೊಬ್ಬರು ತೀವ್ರ ಅನಾರೋಗ್ಯದಿಂದಿದ್ದು ಸುಮಾರು ಆರುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಮನೆಗೆ ಬಂದಿದ್ದರು.
ಆದರೆ ಉಪ್ಪಿನ ಅಂಶ ಕಡಿಮೆಯಾಗಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನೆರವಿಗೆ ಧಾವಿಸಿದ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅವರು, ಅವರ ಚಿಕಿತ್ಸೆ ಗೆ ಪ್ರತಿ ತಿಂಗಳು ತಗಲುವ ಮೂರು ಸಾವಿರ ರೂಪಾಯಿಗಳ ಔಷಧಿಗಳನ್ನು ಅವರ ಮನೆಗೆ ಹೋಗಿ ತಲುಪಿಸಿದ್ದಾರೆ. ಅನಾರೋಗ್ಯದಿಂದ ಕೆಲಸವೂ ಇಲ್ಲದೆ ಜೀವನ ಮಾರ್ಗವೂ ಇಲ್ಲದೆ ತುಂಬಾ ಕಷ್ಟ ಪಡುವ ಇವರು ಒಬ್ಬಳು ಮಗಳನ್ನು ಕಷ್ಟದಿಂದ ಮದುವೆ ಮಾಡಿಸಿಕೊಟ್ಟಿದ್ದಾರೆ. ಇನ್ನೊಬ್ಬಳು ಮಗಳಿಗೆ ಇನ್ನು ವಿವಾಹವಾಗಬೇಕಿದೆ.
ಮಗಳ ವಿವಾಹಕ್ಕೆ ತೆಗೆದಿರಿಸಿದ್ದ ಚಿನ್ನವನ್ನು ಮಾರಿ ಇವರು ತನ್ನ ಅನಾರೋಗ್ಯಕ್ಕೆ ಚಿಕಿತ್ಸೆ ಮಾಡಿದ್ದರು. ಮನೆ ಬಾಡಿಗೆ ಕೊಡಲು ಕೂಡ ದಾರಿಯಿಲ್ಲದೆ ಪರಿತಪಿಸುವ ಇವರಿಗೆ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರು ದಾನಿಯೊಬ್ಬರ ನೆರವಿನೊಂದಿಗೆ ಒಂದು ವರ್ಷಕ್ಕೆ ಬೇಕಾಗುವ ಸುಮಾರು ಮೂವತ್ತಾರು ಸಾವಿರ ರೂಪಾಯಿಗಳ ಔಷಧಿಗಳನ್ನು ನೀಡುವ ಭರವಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇವರು ತುಂಬಾ ಕಷ್ಟದ ಜೀವನ ನಡೆಸುತ್ತಿದ್ದು ಅವರಿಗೆ ಸಹಾಯ ಸಹಕಾರ ಮಾಡಲು ಮುಂದೆ ಬರುವವರಿದ್ದರೆ ಸಹಾಯ ಮಾಡಬಹುದು.
ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅವರಿಗೆ ಒಂದು ವರ್ಷದ ಔಷಧಿ ನೀಡಲು ಕಾರಣಕರ್ತರಾದ ಉದಾರ ದಾನಿಗೆ ಅಲ್ಲಾಹು ಇನ್ನಷ್ಟು ಬಡವರ ಸೇವೆ ಮಾಡಲು ದೀರ್ಘಾಯುಷ್ಯ, ಆಯುರಾರೋಗ್ಯ,ಸುಖ,ಸಂಪತ್ತು ನೀಡಿ ಅನುಗ್ರಹಿಸಲಿ.
ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.