ಇಡ್ಕಿದು (ವಿಶ್ವ ಕನ್ನಡಿಗ ನ್ಯೂಸ್) : ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಎಸೋಸಿಯೇಶನ್ ಕೋಲ್ಪೆ ಇದರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 8 ನೇ ವರ್ಷದ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮವು ಫೆಬ್ರವರಿ 13 ರಂದು ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ ವಠಾರದಲ್ಲಿ ಬಹಳ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಕೋಲ್ಪೆ ಉಸ್ತಾದ್ ಬಹು: ಎ .ಕೆ ಅಬ್ದುರ್ರಹ್ಮಾನ್ ಸಅದಿ ಅವರನ್ನು ಸನ್ಮಾನಿಸಲಾಯಿತು.
ದಾರುಲ್ ಮುಸ್ತಫಾ ಮೊರಲ್ ಅಕಾಡಮಿ ನಚ್ಚಬೆಟ್ಟು ಇದರ ವಿದ್ಯಾರ್ಥಿ ಅಹ್ಮದ್ ಹಾಫಿಲ್ಹ್ ರವರ ಕಿರಾಅತ್ ನೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಕೋಲ್ಪೆ ಬದ್ರಿಯಾ ಜುಮ್ಮಾ ಮಸ್ಜಿದ್ ಖತೀಬರಾದ ಬಹು:ಅಲ್ ಹಾಜಿ ನಿಝಾರ್ ಸುಲ್ತಾನಿ ಅಸ್ಸಖಾಫಿ ಉಳ್ಳಾಲ ಇವರು ಬುರ್ದಾ ಮಜ್ಲಿಸ್ ನ ಮಹತ್ವವನ್ನು ವಿವರಿಸಿ ಬುರ್ದಾ ಮಜ್ಲಿಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ಬದ್ರಿಯಾ ಜುಮ್ಮಾ ಮಸ್ಜಿದ್ ಹಾಗೂ ಜಮಾತ್ ಕಮೀಟಿ ಅಧ್ಯಕ್ಷರಾದ ಶೇಖಬ್ಬ ಕೋಲ್ಪೆ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ನಂತರ ಪ್ರಭಾಷಣ ಪೀಠದ ದ್ರುವ ತಾರೆ ಮೌಲಾನ ಮಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಿದರು. ಬಳಿಕ ಬದ್ರಿಯಾ ಜುಮಾ ಮಸ್ಜಿದ್ ಹಾಗು ಮದ್ರಸ ಕೋಲ್ಪೆ ಯಲ್ಲಿ 19 ವರ್ಷಗಳ ಕಾಲ ಖತೀಬರಾಗಿ ದೀನಿ ಸೇವೆನಗೈದ ಕೋಲ್ಪೆ ಉಸ್ತಾದ್ ಎಂದೇ ಚಿರ ಪರಿಚಿತರಾದ ಬಹು: ಎ .ಕೆ ಅಬ್ದುರ್ರಹ್ಮಾನ್ ಸಅದಿ ಉಸ್ತಾದರಿಗೆ ಆಶೀಖುರ್ರಸೂಲ್ ಸೈಯದ್ ತ್ವಾಹ ತಂಙಳ್ ರವರ ನೇತ್ರತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಗೌರವಾರ್ಪಣೆ ಸ್ವೀಕರಿಸಿ ಕೃತಜ್ಞತಾ ಮಾತುಗಳನ್ನಾಡಿದ ಬಹು: ಎ .ಕೆ ಅಬ್ದುರ್ರಹ್ಮಾನ್ ಸಅದಿ ಉಸ್ತಾದರು ಜಮಹತ್ ಕಮಿಟಿ ಹಾಗು ಜಮಾಅತ್ ಬಾಂದವರು ತೋರಿದ ಪ್ರೀತಿ ಸ್ನೇಹ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ 19 ವರ್ಷಗಳ ದೀನಿ ಸೇವೆನೆ ಮಾಡಲು ಅವಕಾಶ ನೀಡಿದ ಕೋಲ್ಪೆಯ ಜನತೆಗೆ ಕೃತಜ್ಞತೆಯನ್ನು ಸಲ್ಲಿಸಿದರು.
ತದ ನಂತರ ತನ್ನದೇ ಶೈಲಿಯಲ್ಲಿ ಕೇಳುಗರ ಕಿವಿಯನ್ನು ಇಂಪಾಗಿಸುವ ಹಲವಾರು ಮದ್ಹ್ ಗೀತೆಗಳನ್ನು ರಚಿಸಿ ಹಾಡುವುದರ ಮೂಲಕ ವಿಶ್ವಾಸಿಗಳನ್ನು ಮದೀನಾದತ್ತ ಕೊಂಡೊಯ್ಯುವ ಆಶೀಖುರ್ರಸೂಲ್ ಸೈಯದ್ ತ್ವಾಹ ತಂಙಳ್ ಹಾಗೂ ಸಂಗಡಿಗರ ಬೃಹತ್ ಬುರ್ದಾ ಮಜ್ಲಿಸ್ ಆರಂಭಗೊಂಡಿತು. ತಂಡದಲ್ಲಿದ್ದ ಶಾಹಿನ್ ಬಾಬು ತಾನೂರ್ ತನ್ನ ಆಕರ್ಷಕ ಸ್ವರಗಳಿಂದ ಕೂಡಿದ ವಿವಿಧ ಬಗೆಯ ನೆಬಿ(ಸ.ಅ) ಕೀರ್ತನೆಗಳನ್ನು ಹಾಡಿದರು.ನಾಥೆ ಶರೀಫ್ ಗಾಯನ ಲೋಕದ ಅದ್ಬುತ ತಾರೆ ಶಿಹಾನ್ ಉಳ್ಳಾಲ ನಾಥೆ ಶರೀಫ್ ಆಲಾಪನೆ ಮಾಡಿದರು.
ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಬದ್ರಿಯಾ ಮದ್ರಸ ಕೋಲ್ಪೆ ಇದರ ಪ್ರದಾನ ಅಧ್ಯಾಪಕರಾದ ಅಬ್ದುರಹ್ಮಾನ್ ಸಕಾಫೀ ತಂಬಿನಮಕ್ಕಿ, ಮುಅಝಿನ್ ಉಸ್ತಾದ್ ಉಮ್ಮರ್ ಮುಸ್ಲಿಯಾರ್ ಬಾಳೆಪುಣಿ, ಅಳಕೆಮಜಲು ಜುಮ್ಮಾ ಮಸ್ಜಿದ್ ಖತೀಬರಾದ ಎಸ್.ವೈ ಮುಹಮ್ಮದ್ ಶೆರಿಫ್ ಸಖಾಫಿ, ಕಂಬಳಬೆಟ್ಟು ಜುಮ್ಮಾ ಮಸ್ಜಿದ್ ಖತೀಬರಾದ ಇಬ್ರಾಹಿಂ ಮದನಿ, ಸೂರ್ಯ ಜುಮ್ಮಾ ಮಸ್ಜಿದ್ ಖತೀಬರಾದ ಹನೀಫ್ ಸಖಾಫಿ, ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ ಉಪಾಧ್ಯಕ್ಷರಾದ ಸುಲೈಮಾನ್ ಕೋಲ್ಪೆ ,ಪ್ರದಾನಕಾರ್ಯದರ್ಶಿ ಲತೀಫ್ ದಲ್ಕಾಜೆ. ಹಿರಿಯರಾದ ಅಬ್ಬಾಸ್ ಕೋಲ್ಪೆ , ಅಹಮ್ಮದ್ ಕುಂಞಿ ಕೋಲ್ಪೆ, ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷರಾದ ಅಬ್ದುಲ್ ಬಶೀರ್ ಕೋಲ್ಪೆ, ಪ್ರದಾನಕಾರ್ಯದರ್ಶಿ ಆಸೀಫ್ ಕೋಲ್ಪೆ, ಬುರ್ದಾ ಸಮೀತಿ ಅಧ್ಯಕ್ಷರಾದ ರಿಯಾಜ್ ಕೋಲ್ಪೆ, ಕೋಶಾಧಿಕಾರಿ ಅಜಿನಾಸ್ ಕೋಲ್ಪೆ , ನಿಸಾರ್ ಕೋಲ್ಪೆ ನಿಯಾಝ್ ಕೋಲ್ಪೆ, ಅಬೂಬಕ್ಕರ್ ಗೋಡನ್ ನಿಸಾರ್ ಕೋಲ್ಪೆ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು. ಹಾರಿಸ್ ಮದನಿ ಶಾಂತಿನಗರ ಕಾರ್ಯಕ್ರಮವನ್ನು ನಿರೂಪಿಸಿದರು. ನೌಶಾದ್ ಕೋಲ್ಪೆ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.