(www.vknews.in) : ಬಿ.ಸಿ.ರೋಡ್ : ಸಜೀಪ ಚಟ್ಟೆಕಲ್ ಜಲಾಲಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ಫೆಬ್ರವರಿ 25,26ರಂದು ನಡೆಯಲಿರುವ 10 ನೇ ವರ್ಷದ ಜಲಾಲಿಯ್ಯಾ ವಾರ್ಷಿಕ ಕಾರ್ಯಕ್ರಮದ ಎರಡನೇ ದಿನ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ, ಪ್ರತಿಷ್ಠಿತ ಮ’ಅದಿನ್ ಅಕಾಡೆಮಿ ಸ್ಥಾಪಕ ಸಯ್ಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಕಡಲುಂಡಿ ಅವರು ಆಗಮಿಸಲಿದ್ದಾರೆ.
ಫೆಬ್ರವರಿ 25,26 ರಂದು ಚಟ್ಟೆಕಲ್ ಜುಮ್ಮಾ ಮಸೀದಿಯಲ್ಲಿ ಅಸ್ಸಯ್ಯದ್ ಮುಷ್ತಾಕುರ್ರಹ್ಮಾನ್ ತಂಙಳ್ ರವರ ನೇತ್ರತ್ವದಲ್ಲಿ ಜಲಾಲಿಯಾ ವಾರ್ಷಿಕ ನಡೆಯಲಿದ್ದು . ಫೆಬ್ರವರಿ25 ರಂದು ಜಿಸ್ತಿಯಾ ಖುತಿಬಿಯ್ಯತ್ ನೇತೃತ್ವವನ್ನು ಮುಹಮ್ಮದ್ ಅಲಿ ಮದನಿ ಕಲ್ತರ ಕೋಝಿಕೋಡ್ ವಹಿಸಲಿದ್ದಾರೆ. ಧಾರ್ಮಿಕ ಮತಪಂಡಿತರು, ಸಾಮಾಜಿಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಲಾಲಿಯ್ಯ ಜುಮ್ಮಾ ಮಸೀದಿ ಚಟ್ಟೆಕಲ್ ಇದರ ಆಡಳಿತ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.