ಉಳ್ಳಾಲ (www.vknews.in) : ವಿವಾಹಿತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಕೊಲ್ಯ ಕಣೀರು ತೋಟದ ಕಣೀರು ಬೀಡು ಎಂಬಲ್ಲಿ ನಡೆದಿದೆ. ಕಣೀರು ಬೀಡು ನಿವಾಸಿ ಪ್ರವೀಣ್ ಪೂಜಾರಿ (34) ಮೃತರು ಎಂದು ಗುರುತಿಸಲಾಗಿದೆ.
ಪ್ರವೀಣ್ ಖಾಸಗಿ ಬಸ್ಸಿನಲ್ಲಿ ಚೆಕ್ಕರ್ ಕೆಲಸ ನಿವರ್ಹಿಸುತ್ತಿದ್ದು, ನಿನ್ನೆ ಸಂಜೆ 6 ಗಂಟೆಗೆ ಮನೆಗೆ ಬಂದವರು ಕೋಣೆಯೊಳಗೆ ತೆರಳಿದ್ದರು.ಈ ವೇಳೆ ಪ್ರವೀಣ್ ತಾಯಿ ಮನೆ ಹೊರಗಡೆ ಬೀಡಿ ಕಟ್ಟುತ್ತಿದ್ದರೆನ್ನಲಾಗಿದೆ. ಸಂಜೆ 7.30ರ ಸುಮಾರಿಗೆ ಪತ್ನಿ ಕೆಲಸದಿಂದ ಮರಳಿದಾಗ ಕೋಣೆಯೊಳಗಿನ ಪಕ್ಕಾಸಿಗೆ ಪ್ರವೀಣ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಪ್ರವೀಣ್ ಅವರನ್ನ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.