ಇದೇ ಮೊದಲ ಬಾರಿಗೆ 18 ಭಾರತೀಯ ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಲಾಗಿದೆ..
ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಾಕಿಸ್ತಾನ ಮೂಲದ ನಾಲ್ಕು ಯೂಟ್ಯೂಬ್ ಚಾನೆಲ್ ಸೇರಿದಂತೆ 22 ಯೂಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸಿದೆ. ದೇಶದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ವಿದೇಶಾಂಗ ಸಂಬಂಧಗಳ ಬಗ್ಗೆ ಸುಳ್ಳು ಪ್ರಚಾರ ಮಾಡಿದ್ದಕ್ಕಾಗಿ ಚಾನೆಲ್ಗಳನ್ನು ನಿಷೇಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಐಟಿ ಕಾಯ್ದೆ, 2021 ರ ಅಡಿಯಲ್ಲಿ ಇದೇ ಮೊದಲ ಬಾರಿಗೆ 18 ಭಾರತೀಯ ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಲಾಗಿದೆ.
ಎಆರ್ ಪಿ ನ್ಯೂಸ್, ಸರ್ಕಾರ್ ಬಾಬು, ಆನ್ ಲೈನ್ ಖಬರ್, ಡಿಪಿ ನ್ಯೂಸ್, ಕಿಸಾನ್ ತಕ್, ಭಾರತ್ ಮೌಸಮ್, ದಿನ್ ಭರ್ ಕಿ ಖಬರ್ ಮತ್ತು ಡಿಜಿ ಗುರುಕುಲ್ ನಂತಹ ಭಾರತೀಯ ಚಾನೆಲ್ ಗಳನ್ನು ನಿಷೇಧಿಸಲಾಗಿದೆ. ಗುಲಾಮ್ ನಬಿ ಮದನಿ, ಹಕೀಕತ್ ಟಿವಿ ಮತ್ತು ಹಕೀಕತ್ ಟಿವಿ 2.0 ನಿಷೇಧಿತ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ ಗಳಲ್ಲಿ ಸೇರಿವೆ.
ಯೂಟ್ಯೂಬ್ ಚಾನೆಲ್ಗಳಲ್ಲದೆ, ಮೂರು ಟ್ವಿಟ್ಟರ್ ಖಾತೆಗಳು, ಫೇಸ್ಬುಕ್ ಖಾತೆ ಮತ್ತು ಸುದ್ದಿ ವೆಬ್ಸೈಟ್ ಅನ್ನು ಸಹ ಸಚಿವಾಲಯವು ನಿರ್ಬಂಧಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.