ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : 2022 ರ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ 219 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮಸ್ಕ್ ಅವರು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ಅಮೆಜಾನ್ ಸಿಇಒ ಜೆಫ್ ಬೆಜೋಸ್ 171 ಬಿಲಿಯನ್ ಡಾಲರ್ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಫ್ರೆಂಚ್ ಫ್ಯಾಷನ್ ದೈತ್ಯ ಬರ್ನಾರ್ಡ್ ಅರ್ನಾಲ್ಟ್ ಅವರ ಕುಟುಂಬವು 158 ಬಿಲಿಯನ್ ಡಾಲರ್ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ 129 ಬಿಲಿಯನ್ ಡಾಲರ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಹೂಡಿಕೆ ಗುರು ವಾರೆನ್ ಬಫೆಟ್ 118 ಬಿಲಿಯನ್ ಡಾಲರ್ನೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಜಾಗತಿಕವಾಗಿ 90.7 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಅದಾನಿ ಗ್ರೂಪ್ನ ಗೌತಮ್ ಅದಾನಿ 90 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ.
HCL ಸ್ಥಾಪಕ ಶಿವ ನಾಡಾರ್ (28.7 ಬಿಲಿಯನ್ ಡಾಲರ್), ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಸಂಸ್ಥಾಪಕ ಸೈರಸ್ ಪೂನಾವಾಲಾ (24.3 ಬಿಲಿಯನ್ ಡಾಲರ್) ಮತ್ತು ಚಿಲ್ಲರೆ ಫ್ಯಾಷನ್ ದೈತ್ಯ ರಾಧಾಕಿಶನ್ ದಮಾನಿ (20 ಬಿಲಿಯನ್ ಡಾಲರ್) ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಜಾಗತಿಕವಾಗಿ 490ನೇ ಸ್ಥಾನದಲ್ಲಿರುವ ಲುಲು ಗ್ರೂಪ್ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ 5.4 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ.
ಇನ್ಫೋಸಿಸ್ ನ ಎಸ್. ಗೋಪಾಲಕೃಷ್ಣನ್ 4.1 ಬಿಲಿಯನ್ ಡಾಲರ್, ಬೈಜು ಆ್ಯಪ್ನ ಬೈಜು ರವೀಂದ್ರನ್ 3.6 ಬಿಲಿಯನ್ ಡಾಲರ್, ರವಿ ಪಿಳ್ಳೈ 2.6 ಬಿಲಿಯನ್ ಡಾಲರ್, ಶಿಬುಲಾಲ್ (2.2 ಬಿಲಿಯನ್ ಡಾಲರ್), ಜೆಮ್ಸ್ ಗ್ರೂಪ್ ಅಧ್ಯಕ್ಷ ಸನ್ನಿ ವರ್ಕಿ (2.1 ಬಿಲಿಯನ್ ಡಾಲರ್), ಜಾಯ್ ಅಲುಕ್ಕಾಸ್ (1.9 ಬಿಲಿಯನ್ ಡಾಲರ್) ಮತ್ತು ಮುತ್ತೂಟ್ ಕುಟುಂಬ (ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್, ಜಾರ್ಜ್ ಜಾಕೋಬ್ ಮುತ್ತೂಟ್, ಜಾರ್ಜ್ ಥಾಮಸ್ ಮುತ್ತೂಟ್ ಮತ್ತು ಸಾರಾ ಜಾರ್ಜ್ ಮುತ್ತೂಟ್ (ತಲಾ 1.4 ಬಿಲಿಯನ್ ಡಾಲರ್) ಈ ಪಟ್ಟಿಯಲ್ಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.