ದುಬೈ (www.vknews.in) : ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕರ್ನಾಟಕ ಯುಎಇ ಸಮಿತಿಯ ಕೋಶಾಧಿಕಾರಿ, ಸಮಸ್ತ ವಿದ್ಯಾ ಸಂಸ್ಥೆಗಳ ಸಕ್ರೀಯ ಕಾರ್ಯಕರ್ತ ಜನಾಬ್ ಸಿರಾಜ್ ಬಿ ಸಿ ರೋಡ್ ಅವರ ತಂದೆ ಪ್ಯಾರಡೈಸ್ ಹೋಟೆಲ್ ಮಾಲಕ ಮುಹಮ್ಮದ್ ಮಿತ್ತಬೈಲ್ ಅವರು ಮೆ 15 ಆದಿತ್ಯವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಮೃತರು ಏಳು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳನ್ನು ಮತ್ತು ಅಪಾರ ಬಂದು ಮಿತ್ರಾದಿಗಳನ್ನು ಅಗಲಿದ್ದಾರೆ.
ಸಿರಾಜ್ ಬಿ ಸಿ ರೋಡ್ ಅವರ ತಂದೆಯ ವಿಯೋಗಕ್ಕೆ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷರಾದ ಸೈಯ್ಯದ್ ಆಸ್ಕರ್ ಅಲಿ ತಂಙಳ್ ಮತ್ತು ಅಧೀನ ಸಮಿತಿಗಳ ಪ್ರಮುಖರು ಅಗಾಧ ದುಃಖವನ್ನು ವ್ಯಕ್ತಪಡಿಸಿ ಸಂತಾಪವನ್ನು ಸೂಚಿಸುವುದರೊಂದಿಗೆ ಮೃತರ ಮೇಲೆ ಎಲ್ಲಾ ದೀನಿ ಸಹೃದಯರು ಮಯ್ಯಿತ್ ನಮಾಝ್ ಮತ್ತು ವಿಶೇಷ ದುಆ ಕಾರ್ಯವನ್ನು ನೆರವೇರಿಸಬೇಕೆಂದು ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.