ಕಲ್ಲಿಕೋಟೆ (www.vknews.in) : ನಾಡಿನ ಸೌಹಾರ್ದತೆಯನ್ನು ಧ್ವಂಸ ಮಾಡುವ ಕಾರ್ಯಾಚರಣೆ, ಭಾಷಣ, ಘೋಷಣೆಗಳನ್ನು ಕೂಗಿ ನಾಗರಿಕ ಸಮಾಜದ ನೆಮ್ಮದಿಯನ್ನು ಕೆಡಿಸುವ ಸಮಾಜದ್ರೋಹಿ ಸಂಘಟನೆ ಗಳನ್ನು ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ಜಅ್ಫರ್ ಹೇಳಿದ್ದಾರೆ.
ಕಲ್ಲಿಕೋಟೆಯಲ್ಲಿ ನಡೆದ ಎಸ್ ಎಸ್ ಎಫ್ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಆಲಪ್ಪುಝ ದಲ್ಲಿ ಸಣ್ಣ ಪ್ರಾಯದ ಬಾಲಕ ಕೊಲೆ ಬೆದರಿಕೆಯ ಘೋಷಣೆ ಕೂಗಿರುವುದು ಆತಂಕಕಾರಿ ಬೆಳವಣಿಗೆ. ಈ ರೀತಿಯ ಘೋಷಣೆ ಗಳನ್ನು ಶಾಂತಿ, ಸೌಹಾರ್ದತೆ ಬಯಸುವ ಪ್ರಜ್ಞಾವಂತ ಜನತೆ ವಿರೋಧಿಸುವಾಗ, ಆ ಕೃತ್ಯ ಮಹತ್ವದ ಕಾರ್ಯವೆಂಬಂತೆ ಬಿಂಬಿಸಿ ಸಮರ್ಥನೆ ಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಂಗ ಪ್ರವೇಶ ಗೈದಿದೆ. ಸಣ್ಣ ಪ್ರಾಯದ ಮಕ್ಕಳ ಮನಸ್ಸಿಗೆ ಸ್ನೇಹ ಸಂದೇಶಗಳನ್ನು ಕಲಿಸುವ ಬದಲು ದ್ವೇಷದ ಬೀಜ ಬಿತ್ತುವ ರಾಜಕೀಯ ನೀತಿ ಮಾನವೀಯತೆಗೆ ನಿಲುಕದ್ದಾಗಿದೆ.
ಇಸ್ಲಾಂ ಧರ್ಮದ ಬಗ್ಗೆ ಜನತೆ ತಪ್ಪು ಕಲ್ಪನೆ ಇಡುವ ರೀತಿಯಲ್ಲಿ ಕಾರ್ಯಾಚರಣೆ ಮಾಡುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಯನ್ನು ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ಬೆಂಬಲಿಸದೆ ಸಂಪೂರ್ಣವಾಗಿ ಬಹಿಷ್ಕಾರ ಮಾಡಬೇಕು ಎಂದು ಅವರು ಕರೆ ನೀಡಿದರು. ಎಸ್ ಎಸ್ ಎಫ್ ಕೇರಳ ರಾಜ್ಯಾಧ್ಯಕ್ಷ ಕೆ.ವೈ.ನಿಝಾಮುದ್ದೀನ್ ಫಾಳಿಲಿ ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಗಳಾದ ಹಾಮಿದಲಿ ಸಖಾಫಿ, ನಿಯಾಝ್,ಕೆ.ಬಿ.ಬಶೀರ್ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.