ಕೇರಳ (www.vknews.in) : ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಬೈಕ್ ಸವಾರ ವಿಷ್ಣುಪ್ರಸಾದ್ ಈ ಅನಾಹುತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತ ತನ್ನ ಗೆಳೆಯನ ಬೈಕ್ ನ್ನು ಅತಿ ವೇಗದಲ್ಲಿ ಓಡಿಸಿಕೊಂಡು ಬಂದಿದ್ದಾನೆ. ಈ ಸಂದರ್ಭ ಈ ವೇಳೆ ಬೈಕ್ ಆತನ ನಿಯಂತ್ರಣ ತಪ್ಪಿ ಆತ ಒಂದು ಕಡೆ ಬಿದ್ದರೆ, ಬೈಕ್ ಮೂರು ಪಲ್ಟಿ ಹೊಡೆದು ಟ್ರಾನ್ಸ್ಫಾರ್ಮರ್ ಏರಿದೆ. ಘಟನೆಯ ಬಳಿಕ ಆತ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಬಳಿಕ ಕೇರಳ ವಿದ್ಯುತ್ ಬೋರ್ಡ್ನ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.