ಮಡಿಕೇರಿ(www.vknews.in): ಜಗತ್ತಿನ ಕೋಟ್ಯಾಂತರ ಜನರಿಂದ ಗೌರವಿಸಲ್ಪಡುವ ಪುಣ್ಯ ಪ್ರವಾದಿ (ಸ. ಅ) ರನ್ನು ನಿಂದಿಸಿದ ನೀಚ ಮನಸ್ಥಿತಿಯ ವಕ್ತಾರರ ನಡೆಯನ್ನು ಕೊಡಗು ಜಿಲ್ಲಾ SYS ಸಮಿತಿಯು ಖಂಡಿಸಿದೆ. ಜಿಲ್ಲೆಯ ಸಿದ್ಧಾಪುರದ ವರಕ್ಕಲ್ ಭವನದಲ್ಲಿ ಸೇರಿದ SYS ಜಿಲ್ಲಾ ನಾಯಕರ ಸಂಗಮದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ನೇತಾರರು, ದೇಶದ ಆಡಳಿತ ನಡೆಸುವ ಪಕ್ಷದ ವಕ್ತಾರರು ಈ ನಿಂದನೆಯ ಮೂಲಕ ದೇಶದ ಮಾನವನ್ನು ಕೆಡಿಸಿದ್ದಾರೆ. ಇದಕ್ಕೆ ಕಾರಣರಾದವರನ್ನು ಬಂಧಿಸಿ, ಜೈಲಿಗಟ್ಟುವ ಕೆಲಸ ಸರಕಾರದಿಂದ ಆದಷ್ಟು ಬೇಗ ನಡೆಯಬೇಕೆಂದು ಆಗ್ರಹಿಸಿದ್ದಾರೆ.
ಮುಸ್ಲಿಮರ ಪಾಲಿಗೆ ಪ್ರವಾದಿ (ಸ .ಅ.) ರು ಸರ್ವಸ್ವವಾಗಿದ್ದು, ಅವರೊಂದಿಗಿನ ಪ್ರೇಮವು ಬದುಕಿನ ಅವಿಭಾಜ್ಯ ಅಂಗವಾಗಿದೆ. ಶಾಂತಿ,ನ್ಯಾಯ, ನೀತಿ, ಸಮಾನತೆ, ಕರುಣೆಯ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಮಾಡಿದ ಪ್ರವಾದಿಗಳನ್ನು ಕುಟುಕಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ದೇಶದ ಹಿತವನ್ನು ಕಾಪಾಡಬೇಕೆಂದು ನಾಯಕರು ಒತ್ತಾಯಿಸಿದ್ದಾರೆ. ಇಪ್ಪತಕ್ಕೂ ಅಧಿಕ ಶಾಖೆಗಳಿಂದ ಬಂದ ಪದಾಧಿಕಾರಿಗಳ ಸಂಗಮಕ್ಕೆ SYS ಕೊಡಗು ಜಿಲ್ಲಾಧ್ಯಕ್ಷರಾದ C.P.M ಬಶೀರ್ ಹಾಜಿಯವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಸಮಸ್ತ ಉಲಮಾ ಒಕ್ಕೂಟದ ಕೇಂದ್ರೀಯ ಸಮಿತಿ ಸದಸ್ಯರಾದ ಶೈಖುನಾ ಅಬ್ದುಲ್ಲ ಫೈಝಿ ಉಸ್ತಾದ್ ಉದ್ಘಾಟಿಸಿದರು. ಜಂಇಯ್ಯತುಲ್ ಉಲಮಾ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಫೈಝಿ, ಕೋಶಾಧಿಕಾರಿ ಉಮರ್ ಫೈಝಿ ಉಪಸ್ಥಿತರಿದ್ದರು. SYS ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪೈಝಿ ಸ್ವಾಗತಿಸಿ, ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.