ವಿಡಿಯೋ ವೈರಲ್ ಆದ ಕೂಡಲೇ ಪ್ರಕರಣ ದಾಖಲಿಸಿದ ಪೊಲೀಸರು..
ದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಮನೆಕೆಲಸ ಮಾಡದ ಕಾರಣಕ್ಕೆ ತಾಯಿಯೊಬ್ಬಳು ತನ್ನ ಐದು ವರ್ಷದ ಮಗಳ ಕೈಕಾಲುಗಳನ್ನು ಕಟ್ಟಿ ಟೆರೇಸ್ ಮೇಲೆ ಸುಡುವ ಬಿಸಿಲಿನಲ್ಲಿ ಮಲಗಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಈ ಘಟನೆ ದೆಹಲಿಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆದ ಕೂಡಲೇ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ನಡೆಸಿದ ತನಿಖೆಯ ಸಮಯದಲ್ಲಿ ಸ್ವಂತ ತಾಯಿಯೇ ಹುಡುಗಿಯ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾಗಿ ತಿಳಿದುಬಂದಿದೆ. ಇದು ಮನೆ ಕೆಲಸವನ್ನು ಮಾಡದಿದ್ದಕ್ಕಾಗಿ ತಾಯಿ ತನ್ನ ಮಗಳಿಗೆ ನೀಡಿದ ಶಿಕ್ಷೆಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.