ಬಂಟ್ವಾಳ (www.vknews.in) : ದೇಶದಾದ್ಯಂತ ಜಂತರ್ ಮಂತರ್ ಬೆಂಬಲಿಸಿ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯದ ವತಿಯಿಂದ SIR ವಿರುದ್ಧ ಹಾಗೂ ಮುಖ್ಯ ಚುನಾವಣಾಧಿಕಾರಿಯ ವಜಾ ಆಗ್ರಹಿಸಿ ಬಿ.ಸಿ.ರೋಡ್ – ಕೈಕಂಬ ಜಂಕ್ಷನ್ ನಲ್ಲಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು. .
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ, ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ವಲಯದ ವತಿಯಿಂದ ಆಯೋಜಿಸಿರುವ ಈ ಪ್ರತಿಭಟನಾ ಸಭೆಯು ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಟಿ. ಎಂ. ಹನೀಫ್ ಉಸ್ತಾದ್ ತಾಳಿಪಡ್ಪು ಅವರ ಅಧ್ಯಕ್ಷತೆಯಲ್ಲಿ ನಡೆಯಿತು,
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಮರೋಳಿ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಉವೈಸ್ ಮದನಿ ಅಲ್ ಅಝ್ ಅರಿ ತೋಕೆ, ಮಾಜಿ ಸಚಿವ ಬಿ.ರಮಾನಾಥ ರೈ, ಮಿತ್ತಬೈಲ್ ಎಂ ಜೆ ಎಂ ಖತೀಬ್ ಸಯ್ಯಿದ್ ಬಾಶಿತ್ ಬಅಲವಿ ತಂಙಳ್ ಅಲ್ ಅನ್ಸಾರಿ ಮಾತನಾಡಿದರು.
ಮಿತ್ತಬೈಲ್ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಕೋಶಾಧಿಕಾರಿ ಉಬೈದುಲ್ಲಾ ಹಾಜಿ, ಕೇಂದ್ರ ಸಮಿತಿ ಸದಸ್ಯ ಇಸ್ಮಾಯಿಲ್ ಯಮಾನಿ, ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಹನೀಫ್ ಧೂಮಳಿಕೆ, ಬಂಟ್ವಾಳ ವಲಯ ಉಸ್ತುವಾರಿ ಅಶ್ರೂರ್ ಮಲಿಕ್, ದ.ಕ ವೆಸ್ಟ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮುಸ್ತಫಾ ಕಟ್ಟದಪಡ್ಪು, ಜೊತೆ ಕಾರ್ಯದರ್ಶಿ ಇಮ್ರಾನ್ ಮುಜಿಲೋಡಿ, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಶಾಂತಿ ಅಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಬಂಟ್ವಾಳ ತಹಶೀಲ್ದಾರ್ ಮೂಲಕ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಶಾಂತಿಅಂಗಡಿ ಸ್ವಾಗತಿಸಿ, ವರ್ಕಿಂಗ್ ಕಾರ್ಯದರ್ಶಿ ಉವೈಸ್ ಬಾಂಬಿಲ ವಂದಿಸಿದರು. ಸದಸ್ಯ ಖಲಂದರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.