ಮಂಗಳೂರು (www.vknews.com) : KSCC ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಮೊದಲನೇ ಖಾಸಗಿ ಚಾರ್ಟೆಡ್ ವಿಮಾನವು ದುಬೈ ಮೂಲದ ಅನಿವಾಸಿ ಕನ್ನಡಿಗರನ್ನು ಹೊತ್ತು ಶಾರ್ಜಾ ವಿಮಾನ ನಿಲ್ದಾಣದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಯುಎಇ ಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್(KSCC) ದುಬೈ ಕಮ್ಯೂನಿಟಿ ಡೆವಲಪ್ಮೆಂಟ್ ಅಥೋರಿಟಿಯಲ್ಲಿ ನೋಂದಾಯಿತ ಸಾಮಾಜಿಕ ಸಂಸ್ಥೆಯಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಅದರಂತೆ ಮೊದಲ ವಿಮಾನವು 29 ಗರ್ಭಿಣಿಯರೂ, 5 ನವಜಾತ ಶಿಶು, 16 ಮಕ್ಕಳೂ, ಹಿರಿಯ ನಾಗರಿಕರೂ, ತುರ್ತು ಚಿಕಿತ್ಸಾ ರೋಗಿಗಳೂ, ಸಂದರ್ಶನ ವಿಸಾದಲ್ಲಿ ಉಳಿದುಕೊಂಡವರೂ, ಉದ್ಯೊಗ ಕಳೆದುಕೊಂಡವರೂ, ತಾಯ್ನಾಡಿನಲ್ಲಿ ಮರಣ ಹೊಂದಿದ ವ್ಯಕ್ತಿಯ ರಕ್ತಸಂಬಂಧಿಕರೂ ಸೇರಿದಂತೆ 179 ಪ್ರಯಾಣಿಕರೊಂದಿಗೆ ಶಾರ್ಜಾ ಮೂಲದ ಏರ್ ಅರೇಬಿಯಾ ವಿಮಾನದ ಮೂಲಕ ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:00 ಗಂಟೆಗೆ ಹೊರಟಿದ್ದು ಸುಮಾರು 11:00 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ.
ಅನಿವಾಸಿ ಕನ್ನಡಿಗರಿಗೆ ಖಾಸಗಿ ಚಾರ್ಟೆಡ್ ವಿಮಾನ ಸೌಲಭ್ಯವನ್ನು ಒದಗಿಸುವಲ್ಲಿ ಎಲ್ಲಾ ಭಾರತೀಯ ಪ್ರಾಧಿಕಾರ ಸಂಸ್ಥೆಗಳೂ ಉತ್ತಮ ಸಹಕಾರ ನೀಡಿರುವುದಾಗಿ ಮೊಹಮ್ಮದ್ ಶಫಿ ( ಮ್ಯಾನೇಜರ್, ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್) ತಿಳಿಸಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ KSCC ಯ ಹೆಲ್ಪ್ ಡೆಸ್ಕ್ ತಂಡವು 24*7 ಕಾರ್ಯ ನಿರ್ವಹಿಸಿದ್ದು ಟಿಕೆಟ್ ಮೊತ್ತ ಹೊಂದಿಸಲು ಅಶಕ್ತರಾದ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಒದಗಿಸಿ ಸುರಕ್ಷತೆಯ ನಿಟ್ಟಿನಲ್ಲಿ ಎಲ್ಲಾ ಪ್ರಯಾಣಿಕರಿಗೂ ಲಘು ಉಪಹಾರದೊಂದಿಗೆ ಸುರಕ್ಷಾ ಕವಚವನ್ನೊಳಗೊಂಡ ಪಿಪಿಇ ಕಿಟ್ ಉಚಿತವಾಗಿ ಒದಗಿಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ಪ್ರಯಾಣಿಕರಿಗೂ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೋವಿಡ್ 19 ರಾಪಿಡ್ ಟೆಸ್ಟ್ ನಡೆಸಲಾಗಿದ್ದು ಮಂಗಳೂರಿನ ಮೂರು ಹೋಟೇಲ್ ಗಳಲ್ಲಿ ಕ್ವಾರಂಟೈನ್ ಸೌಲಭ್ಯವನ್ನೂ ಮಾಡಲಾಗಿತ್ತು.
ಅನಿವಾಸಿ ಕನ್ನಡಿಗರಿಗೆ ಚಾರ್ಟೆಡ್ ವಿಮಾನ ಸೌಲಭ್ಯವನ್ನು ಒದಗಿಸಲು ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ,ಜಿಲ್ಲಾ ಪೋಲೀಸ್ ಕಮಿಷನರ್, ಸಾಮಾಜಿಕ ಕಾರ್ಯಕರ್ತರಾದ ಉಮರ್ ಯು.ಎಚ್, ಅಥಾವುಲ್ಲಾ ಜೋಕಟ್ಟೆಯವರಿಗೂ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಪರವಾಗಿ ಕೃತಜ್ಞತೆ ಮತ್ತು ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಈ ಸಂಧರ್ಭದಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗಾಗಿ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಪದಾಧಿಕಾರಿಗಳಾದ ಶಫಿ, ಅಲ್ತಾಫ್, ಜಾವೇದ್, ನಾಸಿರ್ ಸೇರಿದಂತೆ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಅನಿವಾಸಿ ಕನ್ನಡಿಗರಿಗೆ ಚಾರ್ಟೆಡ್ ವಿಮಾನ ಸೌಲಭ್ಯವನ್ನು ಒದಗಿಸಲು ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ,ಜಿಲ್ಲಾ ಪೋಲೀಸ್ ಕಮಿಷನರ್, ಸಾಮಾಜಿಕ ಕಾರ್ಯಕರ್ತರಾದ ಉಮರ್ ಯು.ಎಚ್, ಅಥಾವುಲ್ಲಾ ಜೋಕಟ್ಟೆಯವರಿಗೂ ನಮ್ಮ ಕೃತಜ್ಞತೆ ಮತ್ತು ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ವಿಶ್ವ ಕನ್ನಡಿಗ ನ್ಯೂಸ್
ನಾನು ಕುಟುಂಬದೊಂದಿಗೆ ಇದೇ ವಿಮಾನದಲ್ಲಿ ಪ್ರಯಾಣ ಬೆಳೆಸಿರುವೆನು. ಎಲ್ಲವನ್ನು Kscc ತಂಡ ತುಂಬಾ ವ್ಯವಸ್ಥಿತವಾಗಿ ಅಯೋಜಿಸಿದ್ದರು. ನಾನು ಮೊದಲ ದಿನವೇ indian counslate site ನಲ್ಲಿ ನೋಂದಾಯಿಸಿದ್ದೆನು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅದೇ ರೀತಿ ಇನ್ನು ಬೇರೆ ಬೇರೆ ಚಾರ್ಟೆಡ್ ವಿಮಾನಕ್ಕೆ ಪ್ರಯತ್ನಿಸಿದ್ದೆನು. ಕೊನೆಗೆ kscc ಯವರು ಆಯೋಜಿಸಿದ ಮೊದಲ ವಿಮಾನದಲ್ಲಿ ಅವಕಾಶ ಸಿಕ್ಕಿತು. ಅಲಹಂದುಲಿಲ್ಲಾಹ್. Kscc ಯವರ ಈ ಪ್ರಯತ್ನ ತುಂಬಾ ಶ್ಲಾಘನೀಯ. ಅದೇ ರೀತಿ ಮಂಗಳೂರು ವಿಮಾನ ನಿಲ್ದಾಣದಲ್ಲೂ ಸಹ ಎಲ್ಲಾ ರೀತಿಯ ವ್ಯಯಸ್ಥೆಯನ್ನು ಸಿದ್ಧಪಡಿಸಲಾಗಿತ್ತು. Uae ಯಲ್ಲಿ ನನ್ನ ಹಾಗೆ ಕಷ್ಟ ಪಡುತ್ತಿರುವ 173 ರಷ್ಟು ಪ್ರಯಾನಿಕರಿಗೆ ತುಂಬಾ ಉಪಯೋಗವಾಗಿದೆ. ಇನ್ನು ಹಲವಾರು ಜನರು ಅಲ್ಲಿ ಕಾಯುತ್ತಿದ್ದಾರೆ. Kscc ಎರಡನೇ ಫ್ಲೈಟ್ ಸಹ ಆದಷ್ಟು ಬೇಗ ಉಡವಾನೆಯಾಗಲಿ. ಇನ್ನು ಹಲವಾರು ಸಾಮಾಜಿಕ ಸಂಘಟನೆಗಳು ಚಾರ್ಟೆಡ್ ಫ್ಲೈಟ್ ಗಾಗಿ ಪ್ರಯತಿಸುತ್ತಿದ್ದಾರೆ. ಆದಷ್ಟು ಬೇಗ ಎಲ್ಲವೂ ಸಹಕಾರಗೊಳ್ಳಲಿ. ಸರಕಾರ ಅನಿವಾಸಿಗರನ್ನು ನಿಲಕ್ಷಿಸುತ್ತಿರುವಾಗ ಹಲವಾರು ಸಾಮಾಜಿಕ ಸಂಘಟನೆಗಳನ್ನು ತಮ್ಮಿಂದಾಗುವ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ. ತುಂಬಾ ಶ್ಲಾಘನೀಯ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.